ಹಾನಗಲ್ಲಿನಲ್ಲಿ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯನ್ನು ವೀರಪ್ಪ ಬೈಲವಾಳ ಉದ್ಘಾಟಿಸಿದರು. ಮಾರುತಿ ಶಿಡ್ಲಾಪೂರ, ಹನುಮಂತಪ್ಪ ಮರಗಡಿ, ವಿಠಲ್ ಚೌಗುಲಾ, ಎಸ್.ಆನಂದ, ವೈ.ಕೆ. ಜಗದೀಶ ಇತರರಿದ್ದರು. 
ಹಾವೇರಿ

ಕರ್ನಾಟಕ ನಾಮಕರಣ ಮಾಡಿದ ಧೀಮಂತ: Arasu Birthday

ಮಂಜುನಾಥ ಗದಗಿನ

ಹಾನಗಲ್ಲ: ಶಿಕ್ಷಣ, ಉದ್ಯೋಗ, ಸಮಾನತೆ ತರಲು ದಿಟ್ಟ ಹೆಜ್ಜೆ ಹಾಕಿದ ಡಿ.ದೇವರಾಜ ಅರಸು ನಾಡು ಕಂಡ ಅಪರೂಪದ ರಾಜಕಾರಣಿಯಾಗಿದ್ದರು ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ತಿಳಿಸಿದರು.

ಗುರುವಾರ ಹಾನಗಲ್ಲಿನ ಬಾಬು ಜಗಜೀವನರಾಮ್ ಸಭಾಭವನದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಿ.ದೇವರಾಜು ಅರಸು ಅವರ 111ನೇ ಜನ್ಮದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮೈಸೂರು ಎಂದಿದ್ದ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಉಳುವವನೆ ಒಡೆಯ ಜಾರಿ, ಹಾವನೂರು ವರದಿ ಅನುಷ್ಠಾನ, ವಿದ್ಯಾವಂತರಿಗೆ ಸ್ಟೈಫಂಡ್ ಸೇರಿದಂತೆ ಸಮಾಜದ ಎಲ್ಲ ಸ್ತರದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಅಪರೂಪದ ಮುಖ್ಯಮಂತ್ರಿ ದೇವರಾಜ ಅರಸು ಅವರು ಎಂದರು.
ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೀರಪ್ಪ ಬೈಲವಾಳ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ವಿಠ್ಠಲ್ ಚೌಗುಲಾ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮರಗಡಿ ಮಾತನಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಮರೀಗೌಡ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಎಸ್.ಆನಂದ, ಹನುಮಂತಪ್ಪ ಯಳ್ಳೂರ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಗಂಗಮ್ಮ ಹಿರೇಮಠ, ಮಹೇಶ ಪವಾಡಿ, ಬಸವಣ್ಣೆಪ್ಪ ವಾಲೀಕಾರ, ರಾಜೇಂದ್ರ ರೆಡ್ಡೇರ, ಬಸವರಾಜ ಚವ್ಹಾಣ, ಮಂಜಪ್ಪ ತಡಸದ, ರಾಜೇಂದ್ರ ಬಾರ್ಕಿ, ವಸಂತ ವೆಂಕಟಾಪುರ, ಪರಶುರಾಮ ಹುಳ್ಳೀಕಾಸಿ, ನಿಂಗಪ್ಪ ಕಾಳೇರ, ಶಿವಾಜಿ ಹರಿಜನ, ಚಿದಾನಂದ ಹಿರೇಮಠ, ಪುಟ್ಟಪ್ಪ ಶಿಗ್ಲಿ, ಎಂ.ಎ. ನೆಗಳೂರ, ಬಸನಗೌಡ ಪಾಟೀಲ, ಮಿನಾಕ್ಷಿ ಲಕ್ಕುಂಡಿ, ಸಿದ್ದು ಗೌರಣ್ಣನವರ, ರಾಜು ಶಿರಪಂಥಿ ಇತರರಿದ್ದರು.