ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಹಾನಗಲ್ಲಿನಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತುತು. ಡಿ.ಡಿ.ಲಂಗೋಟಿ, ಸಂತೋಷ ವಡ್ಡರ, ಸುರೇಶ ದಾಸರ, ಐ.ಪಿ.ಕುಂಕೂರ, ವಸಂತ ಚಿಕ್ಕಣ್ಣನವರ, ಸಂತೋಷ ದೊಡ್ಡಮನಿ, ಕೆ.ರೇಣುಕಾ, ಕೆ.ವಿನುತಾ, ಚೈತ್ರಾ ಮಡಿವಾಳರ ಇದ್ದರು. 
ಹಾವೇರಿ

ವಿವಿಧ ಸೌಲಭ್ಯ ವಿಸ್ತರಿಸಲು ಸರ್ಕಾರಕ್ಕೆ ಮನವಿ

ಹಾನಗಲ್ಲ: ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲ್ಪನಿಕ ವೇತನ ಬಡ್ತಿ, ಹಳೇ ಪಿಂಚಣಿ ಯೋಜನೆ ಜಾರಿ, ಶಾಲಾ ಮಕ್ಕಳಿಗೆ ಹಾಗೂ ನೌಕರರಿಗೆ ಸರ್ಕಾರದ ಸೌಲಭ್ಯಗಳನ್ನು ವಿಸ್ತರಿಸಬೇಕು ಎಂದು ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ವಿಠ್ಠಲ ಚೌಗಲಾ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. 
ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡುವ ಸೌಲಭ್ಯಗಳನ್ನು ಅನುದಾನಿತ ಶಾಲಾ ಕಾಲೇಜುಗಳಿಗೂ ನೀಡಬೇಕು. ಜೀವನದ ಸಂಧ್ಯಾ ಕಾಲದಲ್ಲಿ ಆರೋಗ್ಯಕರ ಜೀವನಕ್ಕಾಗಿ ನಿವೃತ್ತಿಯ ಪಿಂಚಣಿ ನೀಡಬೇಕು. ಪಿಂಚಣಿಯಿಲ್ಲದೆ ಉಪಜೀವನಕ್ಕಾಗಿ ಕೃಷಿ ಕಾರ್ಮಿಕರಾಗಿ, ಹೋಂ ಗಾರ್ಡ್‌ಗಳಾಗಿ, ಬೀದಿ ಬದಿ ವ್ಯಾಪಾರಿಗಳಾಗಿ ಕೆಲಸ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಎಂದು ಬೇಧ ಮಾಡದೇ ಸರ್ಕಾರಿ ಶಾಲಾ ಕಾಲೇಜುಗಳ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ತಾಲೂಕು ಅಧ್ಯಕ್ಷ ಡಿ.ಡಿ.ಲಂಗೋಟಿ, ಮಾತನಾಡಿ, ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಬೇಧ ನೀತಿ ಅನುಸರಿಸುತ್ತಿದೆ. ಪಿಂಚಣಿರಹಿತವಾಗಿ ನಿವೃತ್ತಿಗೊಂಡ ನೌಕರರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಎನ್‌ಪಿಎಸ್ ನೌಕರರನ್ನು ಒಪಿಎಸ್ ನೌಕರರನ್ನಾಗಿ ಸೌಲಭ್ಯ ಜಾರಿ ಮಾಡಬೇಕು. ಶೈಕ್ಷಣಿಕ ಹಿತಕ್ಕಾಗಿ ಶಿಕ್ಷಕರು ಸಿಬ್ಬಂದಿಯ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಆದ್ಯತೆಯಾಗಲಿ ಎಂದು ಮನವಿ ಮಾಡಿದರು. 
ಐ.ಪಿ.ಕುಂಕೂರ, ಸುರೇಶ ದಾಸರ, ಸಂತೋಷ ವಡ್ಡರ, ಸಿ.ಎಸ್. ಲಂಗಟಿ, ವಿ.ಬಿ. ಪಟ್ಟಣಶೆಟ್ಟಿ, ಕೆ.ಪಿ. ಹಿರೇಮಠ, ಆರ್.ಎಚ್. ಓಲೇಕಾರ, ವಸಂತ ಚಿಕ್ಕಣ್ಣನವರ, ಎಚ್.ಎಂ. ಶಿರ್ಶಿ, ಬಸವರಾಜ ಕೋರಿ, ಮಂಜುನಾಥ ಅಡವೇರ, ಪರಶುರಾಮ ಹುನಗುಂದ, ಸಂತೋಷ ದೊಡ್ಡಮನಿ, ಎಸ್.ಎಫ್. ಕಮ್ಮಾರ, ಗಣೇಶ ವಡ್ಡರ, ಸಚಿನ್ ನಾಯ್ಕ, ಜಾವೇದ ಅಂಗಡಿ. ಕೆ. ರೇಣುಕಾ, ಕೆ. ವಿನುತಾ, ಚೈತ್ರಾ ಮಡಿವಾಳರ ಇತರರು ಉಪಸ್ಥಿತರಿದ್ದರು.