ಬಿತ್ತನೆ ಬೀಜ, seed ರಸಗೊಬ್ಬರ ದರ ಇಳಿಕೆಗೆ ಮನವಿ ರಟ್ಟಿಹಳ್ಳಿಯಲ್ಲಿ ರೈತ ಸಂಘದ ವತಿಯಿಂದ ತಹಸೀಲ್ದಾರ್ ಶ್ವೇತಾ ಅವರಾವತಿ ಅವರಿಗೆ ಮನವಿ ಸಲ್ಲಿಸಲಾಯಿತು.  
ಹಾವೇರಿ

seed ಬಿತ್ತನೆ ಬೀಜ, ರಸಗೊಬ್ಬರ ದರ ಇಳಿಕೆಗೆ ಮನವಿ

ರಟ್ಟಿಹಳ್ಳಿ: ರೈತರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ವಿವಿಧ ಕಂಪನಿಗಳು ಬಿತ್ತನೆ ಬೀಜ seed ಮತ್ತು ರಸಗೊಬ್ಬರ ಬೆಲೆ ಏರಿಕೆ ಮಾಡಿವೆ. ಇದರಿಂದ ರೈತರಿಗೆ ಹೊರೆಯಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಿಂದ ಭೂಮಿ ಉಳುಮೆ ಮಾಡಲು ಸಮಸ್ಯೆಯಾಗುತ್ತಿದೆ. ವಿದ್ಯುತ್ ಖಾಸಗೀಕರಣ ಕೈಬಿಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು.
ಇಲ್ಲದಿದ್ದರೆ ಜೂ. 10ರಂದು ಹಾವೇರಿಯಲ್ಲಿ ಹೆದ್ದಾರಿ ಸಂಂಚಾರ ಬಂದ್ ಮಾಡಿ, ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದೆ. ರೈತರ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಸುವುದರಿಂದ ರೈತರು ಕೃಷಿಯಿಂದ ದೂರ ಸರಿಯುವಂತೆ ಮಾಡುತ್ತದೆ. ಕೂಡಲೇ ಸರ್ಕಾರ ಈ ಯೋಜನೆ ಕೈಬಿಡಬೇಕು. ತಾಲೂಕಿನ ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು.
ಅಕ್ರಮ-ಸಕ್ರಮ ಯೋಜನೆಯಡಿ ಹಣ ತುಂಬಿಸಿಕೊಂಡಿರುವ ರೈತರಿಗೆ ಹೆಸ್ಕಾಂ ವಿದ್ಯುತ್ ಕಂಬ, ವೈರ್, ಟಿಸಿಗಳನ್ನು ಒದಗಿಸಬೇಕು. 2025-26ನೇ ಸಾಲಿನ ಬೆಳೆವಿಮೆಯಲ್ಲಿ ಸಾಕಷ್ಟು ಅನ್ಯಾಯವಾಗಿದ್ದು, ಮರು ಪರೀಶಿಲನೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ ಮಾತನಾಡಿದರು. ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘಟನೆಯ ಮಂಜನಗೌಡ ಸಣ್ಣಗೌಡ್ರ, ರಾಜು ಮುತ್ತಗಿ, ಶಂಭಣ್ಣ ಮುತ್ತಗಿ, ಎಂ.ಆರ್. ಮಣಕೂರು, ಗಂಗಣ್ಣ ಮರಿಗೌಡ್ರು, ದೇವಿರಪ್ಪ ಪೂಜಾರ, ಹನುಮಂತಪ್ಪ ಗಂಗೈಕೊಪ್ಪ, ಜಗದೀಶ ಮೂಲಿಮನಿ, ರಾಜು ಮಳಗೊಂಡರ, ಪ್ರಶಾಂತ ದ್ಯಾವಕ್ಕಳವರ,ಮಂಜಣ್ಣ ಬಾಗೋಡಿ, ನಿಜಗುಣ ಡಮ್ಮಳ್ಳಿ, ಮಲಕಪ್ಪ ಡಮ್ಮಳ್ಳಿ ಇತರರು ಇದ್ದರು.