ಹಾನಗಲ್ಲ ವಿವೇಕಾನಂದ ನಗರದ ಅನ್ನಪೂರ್ಣೇಶ್ವರಿ ಮತ್ತು ಸಾಯಿಬಾಬಾ ದೇವಸ್ಥಾನಗಳ ವಾರ್ಷಿಕೋತ್ಸವದಲ್ಲಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಮರೇಶ್ವರ ಸ್ವಾಮೀಜಿ, ನಾಗರಾಜ ಪೂಜಾರ, ಸಂದೀಪ ಪಾಟೀಲ, ಅಶೋಕ ದಾಸರ ಇದ್ದರು.  
ಹಾವೇರಿ

ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳು

ಮಂಜುನಾಥ ಗದಗಿನ
ಹಾನಗಲ್ಲ: ಪಟ್ಟಣದ ವಿವೇಕಾನಂದ ನಗರದಲ್ಲಿನ ಅನ್ನಪೂರ್ಣೇಶ್ವರಿ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನದ 5ನೇ ವಾರ್ಷಿಕೋತ್ಸವ ಶುಕ್ರವಾರ ಪೂಜಾ ವಿಧಿ ವಿಧಾನಗಳ ಮೂಲಕ ನಡೆಯಿತು.
ಜಡೆಯ ಮೌನತಪಸ್ವಿ ಶಾಂತಲಿಂಗ ಸ್ವಾಮೀಜಿ ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ಆಗಮಿಸಿದ್ದ ಭಕ್ತರಿಗೆ ಆಶೀರ್ವದಿಸಿದರು. ಬಳಿಕ ದೇವಸ್ಥಾನದಲ್ಲಿ ಹೋಮ ಮತ್ತು ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಜಡೆ-ಬಂಕಸಾಣ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಮರೇಶ್ವರ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳು. ನಮ್ಮ ಸಂಪ್ರದಾಯ, ಪರಂಪರೆ ಮತ್ತು ಧಾರ್ಮಿಕ ಆಚರಣೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ನಿರಂತರವಾಗಿ ನಡೆಯಬೇಕು ಎಂದರು.
ಮಧುಮತಿ ನಾಗರಾಜ ಪೂಜಾರ ದಂಪತಿ, ರವಿಕಿರಣ ಪಾಟೀಲ, ಎಂ.ಪ್ರಸನ್ನಕುಮಾರ, ಆದರ್ಶ ಶೆಟ್ಟಿ, ಅಶೋಕ ದಾಸರ, ರಾಜೇಶ ತಿರುಮಲೆ, ಬಸವರಾಜ ಉತ್ತಂಗಿ, ರಾಮಚಂದ್ರ ದಾಸರ, ಡಾ.ಎನ್.ಎಫ್. ಕಮ್ಮಾರ, ಶಂಭು ಹೇಮಗಿರಿಮಠ, ಸಂದೀಪ ಪಾಟೀಲ, ನೀಲಮ್ಮ ಉದಾಸಿ, ಶಿವಗಂಗಕ್ಕ ಪಟ್ಟಣದ, ರೇಖಾ ಶೆಟ್ಟರ, ಶೋಭಾ ಉಗ್ರಣ್ಣನವರ, ಮಮತಾ ಆರೆಗೊಪ್ಪ ಇತರರು ಪಾಲ್ಗೊಂಡಿದ್ದರು.