ಬ್ಯಾಡಗಿಯಲ್ಲಿ ಇನ್ನರ್‌ವೀಲ್ ಕ್ಲಬ್ 5ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸೇವೆ ಸಲ್ಲಿಸುತ್ತಿರುವ ಸುಷ್ಮಾ ಉಪಾಸಿ, ಪದ್ಮಾವತಿ ಅಂಚೆ, ಶೈಲಾ ಬನ್ನಿಮಟ್ಟಿ, ಮಂಜುಳಾ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು. ಶಿವಜ್ಯೋತಿ, ಲಕ್ಷ್ಮೀ ಉಪ್ಪಾರ, ಪುಷ್ಟ ಇಂಡಿಮಠ, ವಿಜಯಲಕ್ಷ್ಮೀ ಗೌಡ್ರ ಇತರರಿದ್ದರು. 
ಹಾವೇರಿ

ದೊರೆತ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳಲಿ

ಮಂಜುನಾಥ ಗದಗಿನ
ಬ್ಯಾಡಗಿ: ಮಹಿಳೆಯರು ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ನವಚೇತನ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಶಿವಜ್ಯೋತಿ ತಿಳಿಸಿದರು.
ತಾಲೂಕಿನ ಕಸಾಪ ಕಾರ್ಯಾಲಯದಲ್ಲಿ ಜರುಗಿದ ಇನ್ನರ್‌ವೀಲ್ ಕ್ಲಬ್‌ನ 5ನೇ ವರ್ಷದ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆ ಈಗ ನಾಲ್ಕುಗೋಡೆಗಳಿಗೆ ಸೀಮಿತವಾಗಿಲ್ಲ. ಕುಟುಂಬದ ಜವಾಬ್ದಾರಿ ಜತೆ ದೊಡ್ಡ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಸೈ ಅನಿಸಿಕೊಂಡಿದ್ದಾಳೆ ಎಂದರು.
ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಮಾತನಾಡಿ, ಕಳೆದ ಐದು ವರ್ಷಗಳಿಂದ ತಾಲೂಕಿನಾದ್ಯಂತ ಕೆಲ ಆಸಕ್ತ ಮಹಿಳೆಯರೊಂದಿಗೆ ತಂಡ ಕಟ್ಟಿಕೊಂಡು ಶಿಕ್ಷಣ, ಸಮಾಜ ಸೇವೆ, ಮಹಿಳೆಯರ ಜಾಗೃತಿ ಕಾರ್ಯಕ್ರಮ ಸೇರಿದಂತೆ ಹತ್ತಾರು ಸೇವೆಗಳಲ್ಲಿ ತೊಡಗಿದೆ. ಐದು ವರ್ಷಗಳಲ್ಲಿ ಸಂಘಟನೆಗಳ ಮೂಲಕ ಸಾಧನೆ ತೋರಿದ ಮಹಿಳೆಯರನ್ನು ಗುರ್ತಿಸಿ ಇನ್ನಷ್ಟು ಸ್ಫೂರ್ತಿ ತುಂಬಿದ್ದೇವೆ ಎಂದು ಹೇಳಿದರು.
ಈ ವೇಳೆ ಶಿಕ್ಷಕಿ ಸುಷ್ಮಾ ಉಪಾಸಿ, ಪದ್ಮಾವತಿ ಅಂಚೆ, ಶೈಲಾ ಬನ್ನಿಮಟ್ಟಿ, ಮಂಜುಳಾ ಭಜಂತ್ರಿ, ಲಕ್ಷ್ಮೀ ಉಪ್ಪಾರ, ಪುಷ್ಟ ಇಂಡಿಮಠ, ವಿಜಯಲಕ್ಷ್ಮೀ ಗೌಡ್ರ, ಮಹೇಶ್ವರಿ ಪಸಾರದ, ವೇದಾವತಿ ಎಸ್ ಇತರರಿದ್ದರು.