Crime 
ಹಾವೇರಿ

ವಿಪರೀತ ಮದ್ಯ ಸೇವಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ವಿಪರೀತ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ನಾಗೇಂದ್ರನಮಟ್ಟಿಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲಕೆರೆ ತಾಲೂಕಿನ ಚಿಕ್ಕಜಾಜೂರ ಗ್ರಾಮದ ಅಭಿಷೇಕ ಚಂದ್ರಪ್ಪ (24) ಮೃತ ವ್ಯಕ್ತಿ.

ಈತ ಇಲ್ಲಿಯ ವೃದ್ಧಾಶ್ರಮದಲ್ಲಿ ಉಳಿದುಕೊಂಡಿದ್ದ. ವಿಪರೀತ ಮದ್ಯ ಸೇವಿಸುತ್ತಿದ್ದ ಕಾರಣ ಅದರಿಂದ ಹೊರಬರಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.