ಸವಣೂರು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯನ್ನು ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.ಮಂಜುನಾಥ ಶೆಟ್ಟರ, ತಿಪ್ಪಣ್ಣ ಅರಳಿ, ವಿಶ್ವನಾಥ ಕೊಂಚಿಗೇರಿ, ಮಂಜುನಾಥ ಬೆಣ್ಣಿ, ಶಿವಕುಮಾರ ತೆಗ್ಗಿಹಳ್ಳಿ, ಗುರು ಅಂಗಡಿ, ಶೇಖಪ್ಪ ಗುತ್ತಲ, ವೀರಣ್ಣ ಶೆಟ್ಟರ, ರಮೇಶ ಗುಜ್ಜರಿ ಇತರರು ಇದ್ದರು. 
ಹಾವೇರಿ

ಬಣಜಿಗ ಸಮಾಜದ ಸಮಾವೇಶ 23ರಂದು:4th Annual Conference

ಮಂಜುನಾಥ ಗದಗಿನ

ಸವಣೂರು: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸವಣೂರು ತಾಲೂಕು ಘಟಕದ 4ನೇ ವರ್ಷದ ಸಮಾವೇಶ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ತಾಲೂಕು ಮಹಿಳಾ ಘಟಕ ಹಾಗೂ ಯುವ ಘಟಕ ಉದ್ಘಾಟನೆ ಸಮಾರಂಭ ಪಟ್ಟಣದ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಆ.23ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸವಣೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಶೆಟ್ಟರ ತಿಳಿಸಿದರು.

ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸವಣೂರು ತಾಲೂಕು ಘಟಕದ 4ನೇ ವರ್ಷದ ಸಮಾವೇಶ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ತಾಲೂಕು ಮಹಿಳಾ ಘಟಕ ಹಾಗೂ ಯುವ ಘಟಕ ಉದ್ಘಾಟನೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2025-26ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ವಿವಿಧ ಹಂತದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ತಾಲೂಕು ಮಹಿಳಾ ಘಟಕ ಹಾಗೂ ಯುವ ಘಟಕ ಉದ್ಘಾಟನೆ ಜರುಗಲಿದೆ. ಬಂಡಿವಾಡದ ಡಾ.ಎ.ಸಿ. ವಾಲಿ ಗುರೂಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಸಮಾರಂಭ ಉದ್ಘಾಟಿಸುವರು. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಮಹಿಳಾ ಘಟಕ ಉದ್ಘಾಟಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಯುವ ಘಟಕ ಉದ್ಘಾಟಿಸುವರು. ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಶೆಟ್ಟರ ಅಧ್ಯಕ್ಷತೆ ವಹಿಸುವರು.

ಹ್ಮದಖಾನ್ ಪಠಾಣ ಸೇರಿದಂತೆ ಇತರರು ಪಾಲ್ಗೊಳ್ಳುವರು. ಧಾರವಾಡ ಬಸವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷೆ ರಾಜೇಶ್ವರಿ ಕಟ್ಟಿಮನಿ ಉಪನ್ಯಾಸ ನೀಡುವರು. ಯುವ ಘಟಕದ ಅಧ್ಯಕ್ಷ ಕುಮಾರ ರಾಜಕುಮಾರ ಮೆಣಸಿನಕಾಯಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಸೊಪ್ಪಿನ ಇತರರು ಪಾಲ್ಗೊಳ್ಳುವರು ಎಂದರು.

ಕಾರ್ಯದರ್ಶಿ ಶೇಖರ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದಾಧಿಕಾರಿಗಳಾದ ತಿಪ್ಪಣ್ಣ ಅರಳಿ, ವಿಶ್ವನಾಥ ಕೊಂಚಿಗೇರಿ, ಮಂಜುನಾಥ ಬೆಣ್ಣಿ, ಶಿವಕುಮಾರ ತೆಗ್ಗಿಹಳ್ಳಿ, ಗುರು ಅಂಗಡಿ, ಶೇಖಪ್ಪ ಗುತ್ತಲ, ವೀರಣ್ಣ ಶೆಟ್ಟರ, ರಮೇಶ ಗುಜ್ಜರಿ, ಬಸವರಾಜ ಹಾಲಗಿ, ಗಣೇಶ ಬೆಳ್ಳಟ್ಟಿ, ಜಗದೀಶ ದೇಟಿನ, ನಾಗಪ್ಪ ಹುಬ್ಬಳ್ಳಿ, ಸುಮಾ ಸೊಪ್ಪಿ, ರೇಖಾ ಮೆಣಸಿನಕಾಯಿ, ಪುಷ್ಪಾ ತೆಗ್ಗಿಹಳ್ಳಿ, ಪೂರ್ಣಿಮಾ ಗೋಣಿ, ಶಾರದಾ ಸೈಬಣ್ಣನವರ, ವೀರಣ್ಣ ಹಕಾರಿ, ಮಂಜುನಾಥ(ಸಿದ್ದು) ನಾರಾಯಣಪುರ, ಶಿವಪ್ರಸಾಧ ಹೆಬ್ಬಳ್ಳಿ ಇತರರು ಇದ್ದರು.