ಆತ್ಮಹತ್ಯೆ 
ಹಾವೇರಿ

ಕಿರಾಣಿ ವ್ಯಾಪಾರ ಕಡಿಮೆ ಆಯ್ತು ಅಂತಾ ಹಿಂಗ ಮಾಡೋದಾ??

ಕರಿಯಪ್ಪ ಅರಳಿಕಟ್ಟಿ

ಹಾವೇರಿ: ಕಿರಾಣಿ ಅಂಗಡಿ ವ್ಯಾಪಾರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬಂದಿದೆ ಎಂದು ಬೇಸರಗೊಂಡ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವಣೂರ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ನಂಜುಂಡೇಶ್ವರ ಸುರೇಶ ಲಂಗೋಟಿ (30) ಮೃತ ವ್ಯಾಪಾರಿ.

ಈತ ಗ್ರಾಮದಲ್ಲಿ ಹೊಲ್ಸೇಲ್ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ. ಇತ್ತೀಚಿನ ದಿನದಲ್ಲಿ ವ್ಯಾಪಾರ ಕಡಿಮೆಯಾಗಿತ್ತು. ಇದರಿಂದ ಮನನೊಂದು ಜಮೀನಿನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.