ಜಿಲ್ಲೆ

ಯುವ ಕವಿಗೋಷ್ಠಿಗೆ ಕವಿತೆಗಳ ಅರ್ಜಿ ಆಹ್ವಾನ

ಹಾವೇರಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸಂಭ್ರಮ-50ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ಯುವ ಕವಿಗೋಷ್ಠಿಗಳನ್ನು ಆಯೋಜಿಸಿದ್ದು, ಆಸಕ್ತ ಯುವ ಕವಿಗಳಿಂದ ಕತೆಗಳನ್ನು ಆಹ್ವಾನಿಸಲಾಗಿದೆ.

ರಾಜ್ಯದ ಎಲ್ಲ ಭಾಗದ 20ರಿಂದ 40 ವರ್ಷದೊಳಗಿನ ಆಸಕ್ತ ಕವಿಗಳು ಕನಿಷ್ಠ ಮೂರು ಕವಿತೆಗಳನ್ನು ರಚಿಸಿ ಅ.30ರೊಳಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಜಾಲತಾಣ ಸಂಪರ್ಕಿಸಬಹುದೆಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.