ಜಿಲ್ಲೆ

ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಪದವೀಧರರ ಹಿತರಕ್ಷಣೆ ವೇದಿಕೆ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಮೌನಾಚರಣೆ, ಸಂತಾಪ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹಾವೇರಿ ನಗರದ ಗಾಂಧಿ ಸರ್ಕಲ್‌ನಲ್ಲಿ ಬುಧವಾರ ಪದವೀಧರರ ಹಿತರಕ್ಷಣೆ ವೇದಿಕೆ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಮೇಣದಬತ್ತಿ ಹಚ್ಚಿ ಮೌನಾಚರಣೆ ಹಾಗೂ ಸಂತಾಪ ಸೂಚಿಸಲಾಯಿತು. ವೇದಿಕೆ ಅಧ್ಯಕ್ಷ ರಾಘವೇಂದ್ರ ಬಾಸೂರ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ ಲಮಾಣಿ, ಶಂಕರ ಮೆಹರವಾಡೆ, ತಾರಕೇಶ ಮಠದ, ಗದಿಗೆಪ್ಪ ನೆಲೊಗಲ್ಲ, ನಾಗರಾಜ ಬಡಮ್ಮನವರ, ಜಮೀರ್ ಜಿಗರಿ, ಸಿದ್ದು ಪುರದ, ಸುಭಾನಿ ನದಾಫ್, ನವೀದ್ ವರ್ದಿ, ಇತರರಿದ್ದರು.