ಜಿಲ್ಲೆ

ಮುಖ ತೊಳೆಯಲು ಹೋಗಿದ್ದ ಯುವತಿ ಜಾರಿ ಬಿದ್ದು ಸಾವು

Haveri - Kariyappa Aralikatti

ಹಾವೇರಿ: ಮನೆಯಲ್ಲಿ ಮುಖ ತೊಳೆಯಲು ಹೋದ ಯುವತಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಇಲ್ಲಿಯ ಹೊಸನಗರದಲ್ಲಿ ಸೋಮವಾರ ಸಂಭವಿಸಿದೆ.
ಅಂಜುಮ್‌ಬಾನು ಗನಿಸಾಬ ಬ್ಯಾಲದಹಳ್ಳಿ (26) ಮೃತ ಯುವತಿ.
ಈಕೆ ಮನೆಯಲ್ಲಿ ಮುಖ ತೊಳೆದುಕೊಳ್ಳಲು ಹೋದಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಳು. ಅವಳಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.