ಜಿಲ್ಲೆ

ಮತದಾನ ಪ್ರಕ್ರಿಯೆ ಮೂಲಕ ಶಾಲಾ ಸಂಸತ್ತಿಗೆ ನೇಮಕ

ಹಾವೇರಿ: ತಾಲೂಕು ಯತ್ತಿನಹಳ್ಳಿಯ ಸಾಯಿಚಂದ್ರ ಗುರುಕುಲ ಶಾಲೆಯಲ್ಲಿ ಶನಿವಾರ ಮತದಾನ ಪ್ರಕ್ರಿಯೆ ಮೂಲಕ ಶಾಲಾ ಸಂಸತ್ತಿಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು. ದೇವಗಿರಿ ಕ್ಲಸ್ಟರ್‌ನ ಸಿಆರ್‌ಪಿ ಶ್ರೀಕಾಂತ, ಶಾಲೆಯ ಆಡಳಿತಾಧಿಕಾರಿ ಧನ್ಯಾ ಮಾಗಾವಿ, ಮುಖ್ಯ ಶಿಕ್ಷಕಿ ಗೀತಾ ಪಿ.ವೆರ್ಣೆಕರ, ನೋಡಲ್ ಅಧಿಕಾರಿ ಗೋವಿಂದರಾಜ ಕಡಕೋಳ, ರವಿ ಅರಗೋಳ, ಶಾಲಾ ಮಕ್ಕಳು, ಸಿಬ್ಬಂದಿ ಇದ್ದರು.