ಹಾವೇರಿ: ಬಸ್ ಇಳಿಯುವಾಗ ನಡೆದ ನೂಕುನುಗ್ಗಲಿನಲ್ಲಿ ಮಹಿಳೆಯ ಬ್ಯಾಗ್ನಲ್ಲಿದ್ದ ಸುಮಾರು 65 ಗ್ರಾಂ ತೂಕದ ಚಿನ್ನಾಭರಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹಾನಗಲ್ಲ ತಾಲೂಕು ಹೋತನಹಳ್ಳಿ ಗ್ರಾಮದ ಕುಸುಮಾ ಅರುಣಕುಮಾರ ಮಾಯರ (33) ಎಂಬುವರ ಚಿನ್ನಾಭರಣ ದೋಚಿರುವುದು.
ಮಹಿಳೆ ಶಿಗ್ಗಾಂವಿಯಿಂದ ಬರುವಾಗ ಬ್ಯಾಗ ನೋಡಿಕೊಂಡಿದ್ದು ಬ್ಯಾಗನಲ್ಲಿ ಆಭರಣಗಳು ಇದೆ. ಬಳಿಕ ಹಾನಗಲ್ಲ ಕಡೆಗೆ ಹೋಗುವ ಅಂಕಣದಲ್ಲಿ ಬಸ್ ಹತ್ತುವಾಗ ನೂಕುನುಗ್ಗಲು ಉಂಟಾಗಿದ್ದರಿಂದ 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆ, 5 ಗ್ರಾಂ ತೂಕದ ಕರಿಮಣಿ ತಾಳಿಯಲ್ಲಿರುವ ಎರಡು ಮಾಂಗಲ್ಯ ಹೀಗೆ ಒಟ್ಟು 65 ಗ್ರಾಂ ಇರುವ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.