ಹಾವೇರಿ: ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್‌ಸೆಟಿಯಲ್ಲಿ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಏಪ್ರಿಲ್‌ನಲ್ಲಿ 10 ದಿನಗಳ ಪಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ ಆಯೋಜಿಸಲಾಗಿದೆ.
ಪಾನಿಪುರಿ, ಸೇವಪುರಿ, ದಹಿ ಪೂರಿ, ಎಗ್‌ರೈಸ್, ನೂಡಲ್ಸ್, ಗೋಬಿಮಂಚೂರಿ, ಪಾವ್‌ಬಾಜಿ, ವಡಾಪಾವ್ ಇತ್ಯಾದಿ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು. 18ರಿಂದ 45 ವರ್ಷದೊಳಗಿನವರು ಹಾಗೂ ಜಿಲ್ಲೆಯ ಬಿಪಿಎಲ್ ಕಾರ್ಡ್ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ವಿಬ್‌ಸೆಟಿ, ಡಿ.ಸಿ ಆಫೀಸ್ ಕಟ್ಟಡದ ಹಿಂಭಾಗ, ದೇವಗಿರಿ, ಹಾವೇರಿ ಇಲ್ಲಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.