ಜಿಲ್ಲೆ

ಹಾವೇರಿ ವಿವಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ದ್ವಿತೀಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಿಂದ ಧಾರವಾಡದ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೇನ್‌ಬೋ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಹಾವೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕೀರಣ ಮತ್ತು ರೇನ್‌ಬೋ ಮಾಧ್ಯಮ ಹಬ್ಬ ಜರುಗಿತು. ಈ ವೇಳೆ ಏರ್ಪಡಿಸಿದ್ದ ಮಾಧ್ಯಮ ರಸಪ್ರಶ್ನೆ ಮತ್ತು ಪಿಕ್ ಆ್ಯಂಡ್ ನರೇಷನ್ ಹಾಗೂ ರೇಡಿಯೋ ಜಾಕಿ ಸ್ಪರ್ಧೆಯಲ್ಲಿ ಹಾವೇರಿ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಾದ ವಿವೇಕಾನಂದ ಶಂಕಿನ್, ನಾಗರಾಜ ಹೊನ್ನತ್ತಿ, ಸತೀಶ ಗೌಳಿ, ಗಂಗಾಧರ ಕುಲಕರ್ಣಿ ಹಾಗೂ ಶಿವರಾಜ ಭರಡಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹಾವೇರಿ ವಿವಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ, ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ, ಪ್ರಾಧ್ಯಾಪಕ ಡಾ.ವಿಶ್ವನಾಥ ಚಿಂತಾಮಣಿ ,ಡಾ.ಎಸ್.ಎಸ್.ಅಧೋನಿ, ಡಾ.ಚಿದಾನಂದ ಕಮ್ಮಾರ, ಪ್ರೊ.ಮುಸ್ತಾಕ್ ಪೀರಮಾನೆ ತಿಳಿಸಿದ್ದಾರೆ.