ಜಿಲ್ಲೆ

ಸಂಘಟನೆ ಬಲಗೊಳಿಸಲು ಉಡಚಪ್ಪ ಮಾಳಗಿ ಕರೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಜ್ಯ ಎಸ್‌ಸಿ, ಎಸ್‌ಟಿ, ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಸಂಘಟನೆ ಸಮುದಾಯದ ಹಿತಕ್ಕಾಗಿ ಸ್ಥಾಪನೆಯಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಸಂಘಟನೆ ಬಲಗೊಳಿಸಿ ಎಂದು ಸಮಿತಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಮಾದಿಗರ ಸಮಾಜ ಹಾಗೂ ಎಸ್‌ಸಿ, ಎಸ್‌ಟಿ, ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ವೇಳೆ ನಿವೃತ್ತ ಪ್ರಾಚಾರ್ಯ ಆಂಜನಪ್ಪ, ಮಾಲತೇಶ ಅಂಗೂರ, ಶಿವರಾಜ ಹರಿಜನ, ಪ್ರಕಾಶ ಶೆಟ್ಟಿ, ರಮೇಶ ಸೀತೆಗೊಂಡ, ಮಂಜಪ್ಪ ಮರೋಳ, ಬಸವರಾಜ ಮಾಸೂರ, ಜುಂಜಪ್ಪ ಹಾಡೋರ, ಸಂಜೀವ ಹಾಡೋರ, ಚಿಕ್ಕಪ್ಪ ಹಾಡೋರ, ಕರಿಯಪ್ಪ ಹರಿಜನ, ಶೆಟ್ಟಿ ವಿಭೂತಿ, ಬಸವರಾಜ ಕಾಳಿ, ಜಗದೀಶ ಹರಿಜನ, ದುರಗಪ್ಪ ಮಾದರ, ಶಿವರಾಜ ಹದಡಿ, ಬಸವರಾಜ ಹಳ್ಳಳ್ಳಿ, ಪವಿತ್ರಾ ಹರಿಜನ, ಗೌರಮ್ಮ, ಶಬಾನಾ, ಇತರರಿದ್ದರು.