ಜಿಲ್ಲೆ

ಹಾವೇರಿಯಲ್ಲಿ ಬಿಸಿಲು- ಮಳೆಯ ಆಟ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದಲ್ಲಿ ಬುಧವಾರ ಸಂಜೆ ಬಿಸಿಲಿನೊಂದಿಗೆ ಕೆಲಕಾಲ ರಭಸವಾಗಿ ಮಳೆ ಸುರಿಯಿತು. ಈ ಮೂಲಕ ಬಿಸಿಲಿನ ತಾಪಕ್ಕೆ ಕೆಂಡದಂತಾಗಿದ್ದ ಭೂಮಿಗೆ ತಂಪೆರೆದಂತಾಯಿತು.

ಬೇಸಿಗೆ ಆರಂಭದಿಂದ ದಿನದಿಂದ ದಿನಕ್ಕೆ ಬಿಸಿಲಿನ ಆರ್ಭಟ ಜೋರಾಗಿತ್ತು. ಬುಧವಾರವೂ ಬೆಳಗ್ಗೆಯಿಂದಲೇ ಬಿಸಿಲು ಪ್ರಖರವಾಗಿತ್ತು. ಸಂಜೆ ಮೋಡ ಕಾಣಿಸದಿದ್ದರೂ ಬಿಸಿಲಿನ ನಡುವೆಯೇ ಏಕಾಏಕಿ ಸುಮಾರು 20 ನಿಮಿಷಗಳ ಕಾಲ ಜೋರಾಗಿ ಮಳೆ ಸುರಿಯಿತು. ರಸ್ತೆ ಮೇಲೆ ನೀರು ಹರಿಯಿತು. ಹಲವರು ಮೊದಲ ಮಳೆಗೆ ಮೈಯೊಡ್ಡಿ ವಾಹನದಲ್ಲಿ, ನಡೆದುಕೊಂಡು ನೆನೆಯುತ್ತಲೇ ಸಾಗಿದ್ದು ಕಂಡುಬಂತು.