ಜಿಲ್ಲೆ

ಕಾರಿನ ಗಾಜು ಒಡೆದು 33 ಲಕ್ಷ ದರೋಡೆ ಮಾಡಿದ್ದ ಆಂಧ್ರಪ್ರದೇಶದ ಕುಪ್ಪಂ ಗ್ಯಾಂಗ್ ನ ಆರೋಪಿ ಬಂಧನ; ಎಸ್ ಪಿ ಅಂಶುಕುಮಾರ

ಹಾವೇರಿ: ನಗರದ ಉದ್ಯಮಿ ಸಂತೋಷ ಹಿರೇಮಠ ಅವರ ಕಾರಿನ ಗಾಜು ಒಡೆದು 33 ಲಕ್ಷ ದರೋಡೆ ಮಾಡಿದ್ದ ಆಂಧ್ರಪ್ರದೇಶದ ಕುಪ್ಪಂ ಗ್ಯಾಂಗ್ ನ ಆರೋಪಿಯನ್ನು ಜಿಲ್ಲಾ ಪೊಲೀಸರು ಭೇದಿಸಿ, ಆತನಿಂದ 30 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಎಸ್ ಪಿ ಅಂಶುಕುಮಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಐದು ಜನರ ತಂಡ ಕೃತ್ಯ ಎಸಗಿತ್ತು. ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದನ್ನು ಗಮನಿಸಿ, ಕಾರಿನ ಗಾಜು ಒಡೆದು 33 ಲಕ್ಷ ರೂ. ದೋಚಿತ್ತು‌. ಈ ಕುರಿತು ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಬಂಧನಕ್ಕೆ ನಾಲ್ಕು ತಂಡ ರಚಿಸಲಾಗಿತ್ತು.

ಕುಪ್ಪಂನಲ್ಲಿ ರಾಜು ಎಂಬಾತನನ್ನು ಬಂಧಿಸಿ, 30 ಲಕ್ಷ ರೂ. ಜಪ್ತಿ ಮಾಡಲಾಗಿದೆ. ರಾಜು ಆರೋಪಿತರ ತಂಡಕ್ಕೆ ಮಾಹಿತಿ ನೀಡಿ ಹಣ ಸಾಗಿಸಲು ಸಹಕರಿಸಿದ್ದ. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ತಿಳಿಸಿದರು.

ಎಎಸ್ ಪಿ ಎಲ್.ವೈ ಶಿರಕೋಳ, ಇತರರಿದ್ದರು.