ಹಾವೇರಿ: ಶ್ರಾವಣ ಮಾಸದ ಕೊನೆಯ ಸೋಮವಾರದ ಅಂಗವಾಗಿ ಇಲ್ಲಿನ ಬಸವೇಶ್ವರ ನಗರದ ಶ್ರೀ ಗಜಾನನ ಹಾಗೂ ಆಂಜನೇಯ ದೇವಸ್ಥಾನದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಿಗೆ ವಿಶೇಷ ವಪೂಜೆ ಹಾಗೂ ರುದ್ರಾಭಿಷೇಕ ನೆರವೇರಿಸಲಾಯಿತು.
ಜು.25ರಿಂದ ಗ.18ರವರೆಗೆ ನಿತ್ಯವೂ ದ್ವಾದಶ ಜ್ಯೋತಿರ್ಲಿಂಗಗಳು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿತ್ತು. ಸೋಮವಾರ ಸಾಮೂಹಿಕ ರುದ್ರಾಭಿಷೇಕ ಕಾರ್ಯಕ್ರಮ ವಿಶೇಷವಾಗಿ ನಡೆಯಿತು. ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾರ್ಯರ ಸಾನ್ನಿಧ್ಯದಲ್ಲಿ ಪಾಲಿಕೆ ಉತ್ಸವ, ಮಹಾಮಂಗಳಾರತಿ ನೆರವೇರಿತು. ಬಳಿಕ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ.ಎಂ.ಪಟ್ಟಣಶೆಟ್ಟಿ, ಟ್ರಸ್ಟಿಗಳಾದ ಆರ್.ಜಿ.ಕುಲಕರ್ಣಿ, ಎಸ್.ಎಸ್.ಇಟಗಿ, ಎಚ್.ಎಸ್.ಚಿನ್ನಿಕಟ್ಟಿ, ಶಿವಾನಂದ ಕೋಟೂರು, ರಮೇಶ ಸಣ್ಣಿಂಗಮ್ಮನವರ, ಕುಮಾರಸ್ವಾಮಿ ಸಾಲಿಮಠ, ಇತರ ಗಣ್ಯರು, ಸೇರಿದಿಂತೆ ಸಹಸ್ರಾರು ಭಕ್ತರು ಹಾಜರಿದ್ದರು.