ಹಾವೇರಿ: ಅಶ್ವಿನಿ ನಗರದ ಶಿವ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ 15 ಸದಸ್ಯರು ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಮಹಿಳೆಯರಿಗೆ ಮೀಸಲಿರಿಸಿದ್ದ ಸ್ಥಾನಗಳಿಗೆ ಹಲವು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜು.14ರಂದು ನಡೆದ ಚುನಾವಣೆಯಲ್ಲಿ 12 ಸದಸ್ಯರು ಚುನಾಯಿತರಾಗಿದ್ದು, ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಜಿ.ಸುಣಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ನಿರ್ದೇಶಕರು:: ವಿರುಪಾಕ್ಷಪ್ಪ ಕೊಟ್ರಪ್ಪ ಕಡ್ಲಿ, ಜಗದೀಶ ಬಸಪ್ಪ ಮತ್ತೂರ, ಪುಟ್ಟಪ್ಪ ಶೇಖರಗೌಡ ಗಿರಿಗೌಡ್ರ, ಬಸವರಾಜ ಭದ್ರಪ್ಪ ಬೆಳವಡಿ, ಈರಣ್ಣ ಬಸಪ್ಪ ಹೆಡಿಗ್ಗೊಂಡ, ಪ್ರಭುಗೌಡ ಶ್ಯಾಮನಗೌಡ ಪಾಟೀಲ, ವಿರುಪಾಕ್ಷಪ್ಪ ಶಿವಪ್ಪ ತಿಮ್ಮಾಪುರ, ಸುರೇಶ ಚನ್ನಬಸಪ್ಪ ಕಬ್ಬೂರ, ಸಿದ್ದನಗೌಡ ಗಂಗನಗೌಡ್ರ, ಗಂಗಾ ಸುಭಾಷ ಕೋರಿ, ಸೀತಾ ಸುರೇಶ ಗುಡಗೂರ, ಭರಮಪ್ಪ ನಾಗಪ್ಪ ವಡ್ಡರ ಆಡಳಿತ ಮಂಡಳಿ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಪೀರಸಾಬ್ ಸಣ್ಣಬಡೇಸಾಬ ನದಾಫ್, ಸತೀಶ ಎಂ.ಎಸ್. ಹಾಗೂ ಬಸವಣ್ಣೆಪ್ಪ ರಿತ್ತಿ ಮೂವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.