ಜಿಲ್ಲೆ

ಹಾವೇರಿ ಶಾಂತಿನಗರದ ಅಲೆಮಾರಿ ಕಾಲನಿಯಲ್ಲಿ ಗುಡಿಸಲು ಧರೆಗೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನಗರದ ನಾಗೇಂದ್ರನಮಟ್ಟಿ ಬಳಿಯ ಶಾಂತಿನಗರದಲ್ಲಿ ಭಾರೀ ಮಳೆಯಿಂದಾಗಿ ಶನಿವಾರ ಅಲೆಮಾರಿ ಜನಾಂಗದವರು ವಾಸಿಸುವ ಕಾಲನಿಯಲ್ಲಿ ಕೆಲ ಗುಡಿಸಲು ಧರೆಗೆ ಉರುಳಿದ್ದವು. ಉಳಿದ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದ್ದವು. ಇದರಿಂದ ಅಲ್ಲಿನ ನಿವಾಸಿಗಳು ಕಂಗಾಲಾಗಿದ್ದರು. ಅಲೆಮಾರಿಗಳ ಪರಿಸ್ಥಿತಿ ನೋಡಿ. ಗುಡಿಸಲು ಕುಸಿದು ಬಿದ್ದಿವೆ. ಮಳೆ ನೀರು ಒಳಗೆ ನುಗ್ಗಿವೆ. ಶಾಶ್ವತ ಮನೆ ನಿರ್ಮಿಸಿಕೊಡಿ ಎಂದು ಯಾರೂ ಗಮನಹರಿಸುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನೀವು ಮಾತ್ರ ಆರಾಮ ಇರ‌್ರಿ, ತಿಂದು ತೇಗಿ. ನಾವು ಮಾತ್ರ ಗುಡಿಸಲಲಲ್ಲೇ ಸಾಯುತ್ತೇವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.