ಜಿಲ್ಲೆ

ಎಂಬಿಬಿಎಸ್ ಸೀಟು ಗಿಟ್ಟಿಸಿದ ಖುಗ್ರಾಮದ ಮಕ್ಕಳು; ಗಡಿಗ್ರಾಮ ಶಾಕಾರ ಗ್ರಾಮಸ್ಥರಲ್ಲಿ ಮೂಡಿದ ಸಂತಸ

ಹಾವೇರಿ: ತಾಲೂಕಿನ ಕುಗ್ರಾಮ, ವಿಜಯನಗರ ಜಿಲ್ಲೆ ಗಡಿ ಭಾಗದ ಶಾಖಾರ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ಕಡು ಬಡತನವನ್ನು ಮೆಟ್ಟಿನಿಂತು, ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ.

ಜಗದೀಶ ದೇವೀಂದ್ರಪ್ಪ ಬೆಂಡಿಗೇರಿ ಹಾಗೂ ವರ್ಷಾ ಕಮ್ಮಾರ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು. ಜಗದೀಶ ತಂದೆ ಮುಕ್ಕಾಲು ಎಕರೆ ಹೊಲದಲ್ಲಿ ಹೂವು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ವರ್ಷಾ ತಂದೆ ನಿಧನ ಹೊಂದಿದ್ದು, ತಾಯಿ ಟೇಲರಿಂಗ್ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಕಡು ಬಡತನದ ಮಧ್ಯೆಯೂ ಜಗದೀಶ ಹಾಗೂ ವರ್ಷಾ ನಿರಂತರವಾಗಿ ಅಧ್ಯಯನ ಮಾಡಿ, ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಗದಗ ಎಂಬಿಬಿಎಸ್ ಕಾಲೇಜ್‌ನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ವೈದ್ಯರಾಗಿ ಬಡ ರೋಗಿಗಳ ಸೇವೆ ಮಾಡುವ ಕನಸು ಕಂಡಿದ್ದಾರೆ. ಇವರ ಸಾಧನೆ ಕಂಡು ಗ್ರಾಮಸ್ಥರಲ್ಲೂ ಸಂತಸ ಮನೆ ಮಾಡಿದೆ.