ಜಿಲ್ಲೆ

ಮೊದಲ ದಿನ ಸಮೀಕ್ಷೆಗೆ ಆರಂಭದಲ್ಲಿ ತಾಂತ್ರಿಕ ದೋಷ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮೊದಲ ದಿನ ಸಮೀಕ್ಷೆಗೆ ಆರಂಭದಲ್ಲಿ ಸಣ್ಣ ತಾಂತ್ರಿಕ ದೋಷದಿಂದಾಗಿ ಸುಮಾರು ಎರಡು ತಾಸು ವಿಳಂಬ ಉಂಟಾಗಿತ್ತು. ಸಮೀಕ್ಷೆ ನಡೆಸುವ ಸಿಬ್ಬಂದಿ ಪ್ರತ್ಯೇಕ ಆ್ಯಪ್ ಮೂಲಕ ಸಮಗ್ರ ಮಾಹಿತಿ ಅಪ್‌ಲೋಡ್ ಮಾಡುತ್ತಿದ್ದಾರೆ. ಆರಂಭದಲ್ಲಿ ಕೆಲ ಮಾಹಿತಿಗಳು ಅಪ್‌ಲೋಡ್ ಆಗುತ್ತಿರಲಿಲ್ಲ. ನಂತರ ಸಮಸ್ಯೆಗೆ ಪರಿಹಾರ ದೊರೆಯಿತು. ಬಳಿಕ ಸಮೀಕ್ಷೆ ವೇಗ ಪಡೆದುಕೊಂಡಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.