ಸವಣೂರ: ತಾಲೂಕಿನ ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕುರುಬರಮಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಬೆಂಡಿಗೇರಿ ಬುಧವಾರ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಗಳನ್ನು ಉಚಿತವಾಗಿ ವಿತರಿಸಿದರು. ಗ್ರಾಮಸ್ಥರಾದ ಸುರೇಶ ಕಳ್ಳಿಮನಿ, ಬಸವರಾಜ ಕರ್ಜಗಿ, ನೀಲನಗೌಡ ಪಾಟೀಲ, ರವಿ ಬಚ್ಚಪ್ಪಗೌಡ್ರ, ಅಡಿವೆಯ್ಯ ಹಿರೇಮಠ, ಸಂಜೀವ ನಾಯಕ, ಗ್ರಾಪಂ ಸದಸ್ಯ ಅನಿಲಕುಮಾರ ಹೊಂಬಳದ, ಮುಖ್ಯೋಪಾಧ್ಯಾಯೆ ಜಿ.ಕೆ.ಜವಳಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.