ಹಾವೇರಿ: ರಾಜ್ಯ ಸರ್ಕಾರಿ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ 21 ನಿರ್ದೇಶಕರ ಸ್ಥಾನಗಳ ಚುನಾವಣೆಯ ಮತದಾನ ಪ್ರಕ್ರಿಯೆ ಶನಿವಾರ ಶಾಂತಿಯುತವಾಗಿ ನಡೆದಿದ್ದು, ಶೇ.99ರಷ್ಟು ಮತದಾನ ನಡೆದಿದೆ. ತಡರಾತ್ರಿವರೆಗೆ ನಡೆದ ಮತ ಎಣಿಕೆಯಲ್ಲಿ 21 ನಿರ್ದೇಶಕರು ಆಯ್ಕೆಯಾಗಿದ್ದಾರೆ.
ಜಿಲ್ಲಾ ಘಟಕದ ಒಟ್ಟು 64 ಸ್ಥಾನಗಳ ಪೈಕಿ 37 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 6 ಸ್ಥಾನಗಳಿಗೆ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿರಲಿಲ್ಲ. ಉಳಿದ 21 ಸ್ಥಾನಗಳಿಗೆ 46 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಶನಿವಾರ ನಡೆದ ಚುನಾವಣೆಯಲ್ಲಿ ತಡರಾತ್ರಿಯವರೆಗೆ ಮತ ಎಣಿಕೆ ಕಾರ್ಯ ನಡೆಯಿತು. ಅಂತಿಮವಾಗಿ 21 ಅಭ್ಯರ್ಥಿಗಳು ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ನೌಕರರ ಸಂಘದ ಜಿಲ್ಲಾ ಚುನಾವಣಾಧಿಕಾರಿ ಎಂ.ಎಚ್ ಪಾಟೀಲ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಗೆದ್ದ ನಿರ್ದೇಶಕರು:
ಕೃಷಿ ಇಲಾಖೆ ತಾಂತ್ರಿಕೇತರ ವೃಂದದಿಂದ ಚಂದ್ರಶೇಖರ ಸಂಗಣ್ಣವರ, ಕಂದಾಯ ಇಲಾಖೆ ಕ್ಷೇತ್ರ ಸಿಬ್ಬಂದಿಗಳಿಂದ ಮಲ್ಲಿಕಾರ್ಜುನ ಹುಣಸಿಕಟ್ಟಿ, ಕಂದಾಯ ಇಲಾಖೆ ತಾಲೂಕು ಮತ್ತು ಉಪ ವಿಭಾಗಾಕಾರಿಗಳ ಕಚೇರಿಯಿಂದ ಎಸ್.ಹೆಚ್ ಯರೇಮನಿ ಹಾಗೂ ಆರ್.ಎಸ್ ಬೋರೊಜಿ, ವಾಣಿಜ್ಯ ತೆರಿಗೆ ಇಲಾಖೆ ಉಳಿದ ವೃಂದದಿಂದ ಅಕ್ಷಯಕುಮಾರ ಪಾಟೀಲ, ಅಬಕಾರಿ ಇಲಾಖೆಯಿಂದ ಹನುಮಂತಪ್ಪ ಬಾರಕೇರ, ಅಲ್ಪಸಂಖ್ಯಾತರ ಅಭಿವದ್ಧಿ ಇಲಾಖೆಯಿಂದ ಶಂಕರ ನಾಯ್ಕ, ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಹೊನ್ನಮ್ಮ ಬಸವನಾಯ್ಕರ್, ಡಿಎಚ್‌ಒ ಕಚೇರಿಯ ಜಿಲ್ಲಾ ಕೇಂದ್ರದ ಆಡಳಿತ ವಿಭಾಗದಿಂದ ಸಿದ್ದಣ್ಣ ಯಲಿಗಾರ, ಡಿಎಚ್‌ಒ ಕಚೇರಿಯ ಜಿಲ್ಲಾ ಅನುಷ್ಠಾನ ಅಕಾರಿಗಳ ಕಚೇರಿಯಿಂದ ಮಲ್ಲಿಕಾರ್ಜುನ ಮಡಿವಾಳರ, ವೈದ್ಯಕೀಯ ಶಿಕ್ಷಣ ಇಲಾಖೆಯಿದ ಜಯಮ್ಮ ಅಗಡಿ ಹಾಗೂ ಎಂ.ಆರ್. ರಾಜೇಸಾಬನವರ, ಗ್ರಂಥಾಲಯ ಇಲಾಖೆಯಿಂದ ಬಿದ್ದಾಡಪ್ಪ ಮಾಳನಾಯಕ, ಸರಕಾರಿ ಪ್ರಾಥಮಿಕ ಶಾಲೆಯ ವಿಭಾಗದಿಂದ ಕರಿಗಾರ ಮಲ್ಲೇಶ, ಲೋಕೇಶ ವಡ್ಡರ, ಕಮ್ಮಾರ ಮಂಜುನಾಥ, ಅಮ್ಮಿಬಾವಿ ಮೊಹ್ಮದಇಕ್ಬಾಲ್, ಎಂ.ಜಿ ದೊಡ್ಡಗೌಡ್ರಘಿ, ಸರಕಾರಿ ಪ್ರೌಢ ಶಾಲೆಯ ವಿಭಾಗದಿಂದ ದೊಡ್ಮನಿ ನಿಜಾಮುದ್ದಿನ, ಮರಡೂರ ಕ್ಕಿರಪ್ಪ, ಸರಕಾರಿ ಪದವಿ ಪೂರ್ವ ಕಾಲೇಜ್ ವತಿಯಿಂದ ರಾಮಪ್ಪ ಲಮಾಣಿ ಅವರು ಚುನಾವಣೆಯನ್ನು ಎದುರಿಸಿ ವಿಜೇತರಾದರು.
ಅವಿರೋಧ ಆಯ್ಕೆಯಾದ ನಿರ್ದೇಶಕರು:
ಕೃಷಿ ಇಲಾಖೆಯ ತಾಂತ್ರಿಕ ವಂದದಿಂದ ಶಿವಲಿಂಗಪ್ಪ ವಿ.ಕೆ., ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ನವೀನ್ ಬೆನ್ನೂರ, ಜಿಲ್ಲಾಕಾರಿಗಳ ಕಚೇರಿಯಿಂದ ಜಿ.ಎಸ್. ಪಾಟೀಲ, ಆಹಾರ ಇಲಾಖೆಯಿಂದ ಚನ್ನಬಸಪ್ಪ ಸಪ್ಪಿನ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಿಂದ ಶಂಕರ್ ಪವಾರ, ವಾಣಿಜ್ಯ ತೆರಿಗೆ ಇಲಾಖೆಯ ಅಕಾರಿಗಳ ವಂದದಿಂದ ನಾರಾಯಣ ವೈ. ನಿಕ್ಕಂ, ಸಹಕಾರ ಇಲಾಖೆಯಿಂದ ಸಂಜಯ್ ಸುಣಗಾರ, ಪಿಡಬ್ಲೂತ್ಯಡಿ ಇಲಾಖೆಯಿಂದ ಎಂ.ಎಸ್. ಮೆಡ್ಲೇರಿ, ಪಿಆರ್‌ಇಡಿಯಿಂದ ರವಿಕುಮಾರಸ್ವಾಮಿ ಬಿ., ಜಲಸಂಪನ್ಮೂಲ ಇಲಾಖೆಯಿಂದ ರಾಮಕಷ್ಣ, ಜಿಲ್ಲಾ ಪಂಚಾಯಿತಿಯಿಂದ ಇಮಾಮಹುಸೇನ್ ಮುಲ್ಲಾ, ಗ್ರಾಮೀಣಾಭಿವದ್ಧಿ ಇಲಾಖೆಯಿಂದ ಪ್ರಕಾಶ ಲಮಾಣಿ, ದಾವಲಸಾಬ ಕಮಗಾಲ, ಸಮಾಜ ಕಲ್ಯಾಣ ಇಲಾಖೆಯಿಂದ ಆಂಜನೇಯ ಹುಲ್ಲಾಳ, ಹಿಂದುಳಿದ ವರ್ಗಗಳ ಅಭಿವದ್ಧಿ ಇಲಾಖೆಯಿಂದ ಗಿರೀಶ ರೋಣಿಮಠ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮುನಿಶ್ವರ ಚೂರಿ, ಅರಣ್ಯ ಇಲಾಖೆಯಿಂದ ಸಂತೋಷಕುಮಾರ ಪೂಜಾರ, ಆರೋಗ್ಯ ಇಲಾಖೆಯಿಂದ ಅಣ್ಣಪ್ಪ ತೋಟದ, ಕೆ.ಎನ್. ಸಿದ್ದಿ, ಪಿ.ಎನ್. ಪಾಟೀಲ, ಆಯುಷ್ ಇಲಾಖೆಯಿಂದ ಶಂಕರ್ ಓಲೇಕಾರ, ತೋಟಗಾರಿಕೆ ಇಲಾಖೆಯಿಂದ ಜಗದೀಶ ಕರಿಗಾರ, ಕೈಗಾರಿಕೆ ಇಲಾಖೆಯಿಂದ ಅಶೋಕ ಪ್ಯಾಟಿ, ವಾರ್ತಾ ಇಲಾಖೆಯಿಂದ ಭಾರತಿ ಭಜಂತ್ರಿ, ಸರಕಾರಿ ವಿಮಾ ಇಲಾಖೆಯಿಂದ ಆನಂದ್ ತೋಳಮಟ್ಟಿ, ಪಪೂ ಇಲಾಖೆಯಿಂದ ವಿರೇಶ ಹಿತ್ತಲಮನಿ, ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಜಯಪ್ರಕಾಶ ಹೊನ್ನತ್ತೇಪ್ಪನವರ, ಮುದ್ರಾಂಕ ಇಲಾಖೆಯಿಂದ ನವೀನ್‌ಕುಮಾರ್, ಸಾರಿಗೆ ಇಲಾಖೆಯಿಂದ ಶ್ರೀಪಾದ ಬ್ಯಾಳಿಯವರ, ರೇಷ್ಮೆ ಇಲಾಖೆಯಿಂದ ಪರಶುರಾಮ ಗೊಣೆಮ್ಮನವರ, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಶ್ರೀಧರ ಪಕ್ಕೇದ, ಭೂಮಾಪನ ಇಲಾಖೆಯಿಂದ ಶಿವನಗೌಡ ತೋಟದ, ಖಜಾನೆ ಇಲಾಖೆಯಿಂದ ವಿರೇಶ ಹಿರೇಮಠ, ಧಾರ್ಮಿಕ ದತ್ತಿ ಇಲಾಖೆಯಿಂದ ಬಸವಕುಮಾರ ಅಣ್ಣೀಗೇರಿ, ನ್ಯಾಯಾಂಗ ಇಲಾಖೆಯಿಂದ ಸಂಗಪ್ಪ ಹಾವಣಗಿ, ಸುರೇಶ ಬೇನಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಲ್ಲಿಕಾರ್ಜುನ ಗಾಣಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಗಳು ತಿಳಿಸಿದ್ದಾರೆ. ಸಹಾಯಕ ಚುನಾವಣಾಕಾರಿಯಾಗಿ ಶೇಖರ ಹಂಚಿನಮನಿ ಕಾರ್ಯನಿರ್ವಹಿಸಿದರು.
ಕೋಟ್:
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ, ಯಶಸ್ವಿಯಾಗಿ ನಡೆದಿದೆ. ಶೀಘ್ರದಲ್ಲೇ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಸಲಾಗುವುದು.
- ಎಂ.ಎಚ್.ಪಾಟೀಲ, ಜಿಲ್ಲಾ ಚುನಾವಣಾಕಾರಿ, ರಾ.ಸ.ನೌ.ಸಂ, ಹಾವೇರಿ