ಜಿಲ್ಲೆ

ಕಬ್ಬಿನ ಬಾಕಿ ಹಣ 2.32 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಾಲೂಕು ಸಂಗೂರಿನ ಜಿಎಂ ಶುಗರ್ಸ್ ಫ್ಯಾಕ್ಟರಿನಿಂದ ರೈತರ ಕಬ್ಬಿನ ಬಾಕಿ ಹಣ 2.32 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಆರಂಭಿಸಿರುವ ಪ್ರತಿಭಟನೆ ನಾಲ್ಕು ದಿನ ಪೂರೈಸಿದ್ದು, ಸೋಮವಾರವೂ ಗುತ್ತಿಗೆದಾರರ ಸಂದಾನಕ್ಕೆ ಬಾರದ ಹಿನ್ನೆಲೆಯಲ್ಲಿ ಸಕ್ಕರೆ ಸಾಗಿಸುವ ಲಾರಿಗಳನ್ನು ರೈತರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಫ್ಯಾಕ್ಟರಿ ಮಾಲೀಕರು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದರು. ಪ್ರಮುಖರಾದ ರಾಜಶೇಖರ ಬೆಟಗೇರಿ, ಬಸವಣ್ಣೆಪ್ಪ ಬೆಂಚಿಹಳ್ಳಿ, ಚಂದ್ರಪ್ಪ ವರದಿ, ಮಂಜಪ್ಪ ಅಸುಂಡಿ, ಪಕ್ಕೀರಪ್ಪ ಕುರಬರ, ಹೊನ್ನಗೌಡ ಪಾಟೀಲ, ಇತರರಿದ್ದರು.