ಜಿಲ್ಲೆ

ಇವನೇ ನೋಡಿ ಸಲ್ಮಾನ್ ಖಾನ್ ಗೆ ಕೊಲೆ‌ ಬೆದರಿಕೆ ಹಾಕಿದ ಆರೋಪಿ ಬಿಕಾರಾಮ್ ಅಲಿಯಾಸ್ ವಿಕ್ರಮ್ ಜಲಾರಾಮ್ ಬಿಸ್ಣೋಯ್

ಹಾವೇರಿ: ಇವನೇ ನೋಡಿ ಸಲ್ಮಾನ್ ಖಾನ್ ಗೆ ಕೊಲೆ‌ ಬೆದರಿಕೆ ಹಾಕಿದ ಆರೋಪಿ ಬಿಕಾರಾಮ್ ಅಲಿಯಾಸ್ ವಿಕ್ರಮ್ ಜಲಾರಾಮ್ ಬಿಸ್ಣೋಯ್.

ಹಾವೇರಿಯಲ್ಲಿ ಈತನನ್ನು ಸ್ಥಳೀಯ ಪೊಲೀಸರ ಸಹಾಯದಿಂದ ಬಂಧಿಸಿರುವ ಮುಂಬೈ ಪೊಲೀಸರು ಬುಧವಾರ ಮುಂಬೈಗೆ ಕರೆದೊಯ್ದರು.

ರಾಜಸ್ತಾನ ಮೂಲದ ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗೆ ಹಾವೇರಿ ನಗರಕ್ಕೆ ಬಂದಿದ್ದ. ಇಲ್ಲಿನ ಗೌಡರ ಓಣಿಯಲ್ಲಿ ರೂಮ್‌ವೊಂದರಲ್ಲಿ ಕೂಲಿಕಾರರೊಂದಿಗೆ ವಾಸವಾಗಿದ್ದ. ಗ್ರಿಲ್ ಕೆಲಸ ಮಾಡಿಕೊಂಡಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು, ಮುಂಬೈ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಮೊದಲು ಬೇರೆಡೆ ಕೆಲಸ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದೆ ಬಿಕಾರಾಮ್ ಕೂಲಿಗಾಗಿ ಹಾವೇರಿಗೆ ಬಂದಿದ್ದ. ಮುಂಬೈ ಪೊಲೀಸರ ಮಾಹಿತಿ ಆಧಾರದ ಮೇಲೆ ವಶಕ್ಕೆ ಪಡೆದು ಅವರಿಗೆ ಒಪ್ಪಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.