ಹಾವೇರಿ: ಕಾರ್ಮಿಕ ಇಲಾಖೆ ವತಿಯಿಂದ 125 ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಂಗಳವಾರ ಕಿಟ್‌ಗಳನ್ನು ವಿತರಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೋಟ್‌ಬುಕ್, ಲೇಖನ ಸಾಮಗ್ರಿ, ಸುರಕ್ಷಾ ಕವಚ, ಟಿಫಿನ್ ಬಾಕ್ಸ್ ಒಳಗೊಂಡ ಬ್ಯಾಗ್‌ಗಳನ್ನು ವಿತರಿಸಿದರು. ತಾಲೂಕಿಗೆ 187 ಕಿಟ್‌ಗಳು ಮಂಜೂರಾಗಿದ್ದು, ಈ ಪೈಕಿ 125 ಕಾರ್ಮಿಕರ ಮಕ್ಕಳಿಗೆ ಕಿಟ್ ವಿತರಿಸಲಾಯಿತು.
ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಎಸ್.ಎಫ್.ಎನ್.ಗಾಜಿಗೌಡ್ರ, ವಿವಿಧ ಮುಖಂಡರು ಉಪಸ್ಥಿತರಿದ್ದರು.
ಶಂಕುಸ್ಥಾಪನೆ:
ನಗರದ 17ನೇ ವಾರ್ಡ್‌ನಲ್ಲಿ 15ನೇ ಹಣಕಾಸು ಯೋಜನೆಯಡಿ 23 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ರುದ್ರಪ್ಪ ಲಮಾಣಿ ಭೂಮಿ ಪೂಜೆ ಮಾಡಿದರು.