ಜಿಲ್ಲೆ

ಉಪ ಸಭಾಧ್ಯಕ್ಷರ ರುದ್ರಪ್ಪ ಲಮಾಣಿ ಕಾರಲ್ಲಿ ಮಗ ದರ್ಶನ ಲಮಾಣಿ ದರ್ಬಾರ್

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಪಘಾತದಲ್ಲಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅವರ ಪುತ್ರ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ ಲಮಾಣಿ ತಂದೆಯ ಸರ್ಕಾರಿ ಕಾರಿನಲ್ಲಿ ದರ್ಬಾರ್ ಮಾಡುತ್ತಿದ್ದಾರೆ. ರುದ್ರಪ್ಪ ಲಮಾಣಿ ಇತ್ತೀಚೆಗೆ ಚಿತ್ರದುರ್ಗದ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆ ಹಿನ್ನೆಲೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ನಡುವೆ ಅವರ ಪುತ್ರ ದರ್ಶನ ಲಮಾಣಿ ಉಪ ಸಭಾಧ್ಯಕ್ಷರ ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೆಎ 05, ಎ 6000 ನಂಬರ್‌ನ ಸರ್ಕಾರಿ ಕಾರಿನಲ್ಲಿ ದರ್ಶನ್ ತನ್ನ ಬೆಂಬಲಿಗರೊಂದಿಗೆ ಓಡಾಡುತ್ತಿದ್ದಾರೆ. ಸೋಮವಾರ ಬೆಂಗಳೂರಿನಿಂದ ಹಾವೇರಿಗೆ ಬಂದು, ನಗರದ ವಿವಿಧೆಡೆ ಸಂಚರಿಸಿದ್ದಾರೆ. ಈ ಕುರಿತು ಜನರಲ್ಲಿ ಚರ್ಚೆ ಶುರುವಾಗಿದೆ.