ಜಿಲ್ಲೆ

ರಾಣೆಬೆನ್ನೂರಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಹಾವೇರಿ: ರಾಣೆಬೆನ್ನೂರ ನಗರಕ್ಕೆ ಫೆ.7ರಂದು ಉಪರಾಷ್ಟ್ರಪತಿ ಜಗದೀಪ ಧನಕರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯಿಂದ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 3 ಎಸ್‌ಪಿ, 5 ಡಿವೈಎಸ್‌ಪಿ, 13 ಸಿಪಿಐ, 34 ಪಿಎಸ್‌ಐ, 1 ಪ್ಯಾರಾ ಮಿಲಿಟರಿ ತುಕಡಿ, 1 ಬಿಡಿಎಸ್‌ಟಿ, 1 ಎಫ್‌ಎಸ್‌ಎಲ್, 1 ಡಾಗ್ ಸ್ಕ್ವಾಡ್ ಕರ್ತವ್ಯ ನಿರ್ವಹಿಸಲಿದೆ.

ಕಾರ್ಯಕ್ರಮದ ವೇದಿಕೆ ಹಾಗೂ ಹೆಲಿಪ್ಯಾಡ್ ಸುತ್ತಲ್ಲೂ 24/7 ಮಾದರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹೆಲಿಪ್ಯಾಡ್ ಹತ್ತಿರ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.