ಹಾವೇರಿ: ಅರ್ಧ ಗಂಟೆ ಸುರಿದ ಮಳೆಗೆ ಪಿಬಿ ರಸ್ತೆಯಲ್ಲಿ ನದಿಯಂತೆ ಹರಿದ ಮಳೆ ನೀರು.
ಲೋಕೋಪಯೋಗಿ ಕಚೇರಿ, ಪ್ರವಾಸಿ ಮಂದಿರ, ಎಸ್ ಪಿ ಕಚೇರಿ ಎದುರೇ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ, ಚರಂಡಿಯಿಂದ ಅವ್ಯವಸ್ಥೆ.
ಮನೆಗೆ ತೆರಳಲು ಪರದಾಡಿದ ಶಾಲಾ ಮಕ್ಕಳು, ಅರ್ಧ ರಸ್ತೆ ಬಿಟ್ಟು ವಿರುದ್ದ ದಿಕ್ಕಿನಲ್ಲಿ ಚಲಿಸಿದ ವಾಹನ ಸವಾರರು.
ನಗರಸಭೆ, ಲೋಕೋಪಯೋಗಿ ಇಲಾಖೆಯ ಅವ್ಯವಸ್ಥೆಗೆ ಸಾಕ್ಷಿಯಾದ ಮಳೆರಾಯ. ಹಿಡಿಶಾಪ ಹಾಕಿದ ಸಾರ್ವಜನಿಕರು.
ಶಾಲೆ ಬಿಡುವ ಸಂದರ್ಭವಾದ್ದರಿಂದ ಶಾಲೆಯಿಂದ ಮನೆಗೆ ತೆರಳಲು ಮಕ್ಕಳು ಹರಸಾಹಸಪಟ್ಟರು. ರಸ್ತೆ ದಾಟಲೂ ಒದ್ದಾಡಿದರು.
ಇದರ ನಡುವೆ ಆಂಬುಲೆನ್ಸ್ ಒಂದು ಸಿಲುಕಿಕೊಂಡಿತ್ತು. ಇಷ್ಟೆಲ್ಲ ಸಮಸ್ಯೆ ಇದ್ದರೂ ಇಲ್ಲಿ ಸಂಚಾರ ಪೊಲೀಸರು ಕಾಣಿಸಲಿಲ್ಲ.