ಜಿಲ್ಲೆ

ಪಂ.ಪುಟ್ಟರಾಜ ಗವಾಯಿಗಳ 110ನೇ ಜನ್ಮದಿನಾಚರಣೆ

ಹಾವೇರಿ: ಪಂ.ಪುಟ್ಟರಾಜ ಗವಾಯಿಗಳ ಸೇವಾ ಸಮಿತಿ ವತಿಯಿಂದ ಇಲ್ಲಿಯ ಜಯದೇವ ನಗರದಲ್ಲಿ ಸೋಮವಾರ ಪಂ.ಪುಟ್ಟರಾಜ ಗವಾಯಿಯವರ 110ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಪ್ರದೀಪ ನಂದಿಕೇಶ್ವರಮಠ ಮಾತನಾಡಿ, ಕಾಲಕಾಲಕ್ಕೆ ಪುಟ್ಟರಾಜರನ್ನು ನೆನಪಿಸಿಕೊಂಡರೆ, ಸಂಗೀತ, ಆಧ್ಯಾತ್ಮ ಹಾಗೂ ದೈವತ್ವವನ್ನು ಸ್ಮರಿಸಿದಂತೆ. ಈ ನಾಡಿಗೆ ಪುಟ್ಟರಾಜರ ಕೊಡುಗೆ ಅಪಾರ ಎಂದರು. ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಸೇವಾ ಸಮಿತಿ ಕಾರ್ಯದರ್ಶಿ ಶಿವರಾಜ ಉಜ್ಜನಿ, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ ವಾಲ್ಮಿಕಿ, ಡಾ.ಗೀತಾ ಸುತ್ತಕೋಟಿ, ಎ.ಟಿ.ನೀರಲಗಿ, ಬಿ.ಚಂದ್ರಮ್ಮ, ಶಂಕರ ಬಡಿಗೇರ, ಈರಣ್ಣ ಬೆಳವಡಿ, ಡಾ.ದಯಾನಂದ ಸುತ್ತಕೋಟಿ, ಪೃಥ್ವಿರಾಜ ಬೆಟಗೇರಿ, ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲಾಧ್ಯಕ್ಷರಾಗಿ ಡಾ.ಗೀತಾ ಸುತ್ತಕೋಟಿ ಆಯ್ಕೆ
ಸಮಾರಂಭದಲ್ಲಿ ಪುಟ್ಟರಾಜ ಗವಾಯಿಗಳ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರನ್ನಾಗಿ ಡಾ.ಗೀತಾ ಸುತ್ತಕೋಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಮೃತ್ಯುಂಜಯ ರಿತ್ತಿಮಠ ಅವರನ್ನು ಆಯ್ಕೆ ಮಾಡಲಾಯಿತು.