ಶಿಗ್ಗಾಂವಿ: ತಾಲೂಕಿನ ತಡಸ ಸಮೀಪ ತಿಮ್ಮಾಪುರ ಗ್ರಾಮದಲ್ಲಿರುವ ಪಿಆರ್‌ಎಸ್ ವಾಟರ್ ಪಾರ್ಕ್‌ನಲ್ಲಿ ಆಟವಾಡುತ್ತಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಹಾನಗಲ್ಲ ತಾಲೂಕು ಬೆಳಗಾಲಪೇಟ ಗ್ರಾಮದ ಫುಟ್‌ವೇರ್ ವ್ಯಾಪಾರಿ ಗಿರೀಶ ಬಸವರಾಜ ಈಳಗೇರ (36) ಮೃತಪಟ್ಟವರು.
ವಾಟರ್ ಪಾರ್ಕ್‌ನಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ನೀರನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಹೋದರ ಹರೀಶ ತಿಳಿಸಿದ್ದಾರೆಂದು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ವರದಿಯಾಗಿದೆ.