ಹಾವೇರಿ: ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ 2020ನೇ ಸಾಲಿನ ರಾಜ್ಯಮಟ್ಟದ ಪರಿಸರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಶಸ್ತಿ ಪಡೆದ ಹಾವೇರಿಯ ಹಿರಿಯ ಪತ್ರಕರ್ತ ಮಾಲತೇಶ ಅಂಗೂರ ಅವರನ್ನು ಹಾವೇರಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು. ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ ಮಡ್ಲೂರ, ಪತ್ರಕರ್ತರಾದ ಬಸವರಾಜ ಮರಳಿಹಳ್ಳಿ, ವಿನಾಯಕ ಹುದ್ದಾರ, ಕೇಶವಮೂರ್ತಿ ವಿ. ಬೇಲೂರಪ್ಪನವರ, ಮಂಜುನಾಥ ದಾಸಣ್ಣನವರ, ಪರಶುರಾಮ ಡೂಗನವರ, ಶಿವಕುಮಾರ ಹುಬ್ಬಳ್ಳಿ, ಫಕ್ಕೀರಯ್ಯ ಗಣಾಚಾರಿ, ಅಣ್ಣಪ್ಪ ಬಾರ್ಕಿ, ಪವನಕುಮಾರ ಮುಳಗುಂದಮಠ, ಕಿರಣ ಮಾಸಣಗಿ, ಮಾರುತಿ ಮರಾಠೆ, ಶಂಕರ ಕೊಪ್ಪದ, ರಾಜು ಗಾಳೆಮ್ಮನವರ, ನಾಗಪ್ಪ ಮೈದೂರ, ಪ್ರಭುಗೌಡ ಪಾಟೀಲ, ಫಕ್ಕೀರಸ್ವಾಮಿ ಮಟ್ಟೆಣ್ಣನವರ, ಗಂಗಾಧರ ಕುಲಕರ್ಣಿ, ಮದರಸಾಬ ಮಂಜಲಾಪುರ, ಹನುಮಂತ ಕಲ್ಲೇದೇವರ, ಇದ್ದರು.