ಜಿಲ್ಲೆ

ಹಾವೇರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.5ರಂದು ವಿದ್ಯುತ್ ವ್ಯತ್ಯಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಾವೇರಿ 110 ಕೆವಿಯಿಂದ ಹೊರಡುವ ಹೊಸಮನಿ ಸಿದ್ದಪ್ಪ ಮತ್ತು ಗುತ್ತಲ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜ.5ರಂದು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಹಾವೇರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ.

ಎಲ್‌ಬಿಎಸ್ ಮಾರ್ಕೆಟ್, ಶಿವಲಿಂಗ ನಗರ 1ರಿಂದ 5ನೇ ಕ್ರಾಸ್, ಗುತ್ತಲ ರೋಡ್, ರಾಣೆಬೆನ್ನೂರ ರೋಡ್, ಏಲಕ್ಕಿ ಓಣಿ, ಅಕ್ಕಿ ಪೇಟೆ, ಶಿವಲಿಂಗ ನಗರ, ,ಪುರದ ಓಣಿ, ಎಂಜಿ ರೋಡ್, ಗದ್ದಿಗೆಯವರ ಓಣಿ, ಬಣ್ಣದ ಮಠ, ಹುಮನಾಬಾದ್, ಹುಕ್ಕೇರಿ ಮಠ, ಉಳವಿ ಚನ್ನಬಸವೇಶ್ವರ ಲೇಔಟ್ ಹಾಗೂ ಕಂದಕ ರೋಡ್, ಗುತ್ತಲ, ಹೊಸರಿತ್ತಿ ಮತ್ತು ನೀರಲಗಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.