ಜಿಲ್ಲೆ

ಅಂಚೆ ಜೀವ ವಿಮೆ ಏಜೆಂಟರ ನೇರ ನೇಮಕಾತಿ ಆಗಸ್ಟ್ 8ರಂದು

ಹಾವೇರಿ: ಭಾರತೀಯ ಅಂಚೆ ಇಲಾಖೆಯಿಂದ ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಏಜೆಂಟರ ನೇರ ನೇಮಕಾತಿ ಆಗಸ್ಟ್ 8ರಂದು ಬೆಳಗ್ಗೆ ನಗರದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಆಧಾರ್ ಕಾರ್ಡ್, ಪಾನ್‌ಕಾರ್ಡ್, 10ನೇ ತರಗತಿಯ ಅಂಕಪಟ್ಟಿ ಪ್ರತಿ ಹಾಗೂ ಇತ್ತೀಚಿನ ಮೂರು ಭಾವಚಿತ್ರಗಳನ್ನು ತರಬೇಕೆಂದು ಹಾವೇರಿ ಉಪ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.