ಹಾವೇರಿ: ಭಾರತೀಯ ಅಂಚೆ ಇಲಾಖೆಯು ರಾಷ್ಟ್ರಮಟ್ಟದಲ್ಲಿ ಢಾಯಿ ಆಖರ್ ಪತ್ರ ಲೇಖನ ಸ್ಪರ್ಧೆ ಆಯೋಜಿಸಿದೆ.
ಬರವಣಿಗೆಯಲ್ಲಿಡಿಜಿಟಲ್ ಯುಗದಲ್ಲಿ ಅಕ್ಷಗಳ ಪ್ರಾಮುಖ್ಯತೆ ವಿಷಯದ ಕುರಿತು ಪತ್ರ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ. 18 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗಗಳಿವೆ. ಅಂತರ್ದೇಶಿ ಪತ್ರವಾದಲ್ಲಿ ಗರಿಷ್ಠ 500 ಪದಗಳು ಹಾಗೂ ಲಕೋಟೆಯಾದಲ್ಲಿ ಗರಿಷ್ಠ 1,000 ಪದಗಳಿಗೆ ಮೀರದಂತೆ ಬರೆಯಬೇಕು. ರಾಷ್ಟ್ರ ಮಟ್ಟದಲ್ಲಿ ಕ್ರಮವಾಗಿ 50 ಸಾವಿರ ರೂ., 25 ಸಾವಿರ ರೂ. ಹಾಗೂ 10 ಸಾವಿರ ರೂ. ಹಾಗೂ ರಾಜ್ಯ ಮಟ್ಟದಲ್ಲಿ 25 ಸಾವಿರ ರೂ., 10 ಸಾವಿರ ಹಾಗೂ ಐದು ಸಾವಿರ ರೂ. ನಗದು ಪುರಸ್ಕಾರವಿದೆ.
ಇಂಗ್ಲಿಷ, ಹಿಂದಿ ಅಥವಾ ಕನ್ನಡ ಭಾಷೆಯಲ್ಲಿ ಬರೆದ ಪತ್ರಗಳನ್ನು ಅಂಚೆ ಅಧೀಕ್ಷಕರು, ಹಾವೇರಿಯ ಕಚೇರಿ ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ https://sevasindhu.karnataka.gov.in/sevasindhu/departmentServies ಜಾಲತಾಣ ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು ಎಂದು ಹಾವೇರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.