Motorcycle and truck accident 
ಜಿಲ್ಲೆ

ಅಂಚೆ ಇಲಾಖೆಯಿಂದ ಅಪಘಾತ ವಿಮಾ ಯೋಜನೆ; 549 ರೂ.ಗೆ 10 ಲಕ್ಷ, 749 ರೂ.ಗೆ 15 ಲಕ್ಷ ಅಪಘಾತ ಇನ್ಸುರೆನ್ಸ್ ಸೌಲಭ್ಯ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಅಂಚೆ ಇಲಾಖೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ವಿವಿಧ ವಿಮಾ ಕಂಪನಿಗಳ ಸಹಯೋಗದೊಂದಿಗೆ ಅಪಘಾತ ವಿಮೆ ಒದಗಿಸಲು ವಿಶೇಷ ಅಭಿಯಾನ ಆರಂಭಿಸಲಾಗಿದೆ.
18ರಿಂದ 65 ವರ್ಷದೊಳಗಿನವರು ವಾರ್ಷಿಕ 459 ಅಥವಾ 749 ರೂ. ಪ್ರೀಮಿಯಂನೊಂದಿಗೆ ಸಮಗ್ರ ಅಪಘಾತ ವಿಮಾ ಯೋಜನೆಯ ಫಲಾನುಭವಿಗಳಾಗಬಹುದು.
ಅಪಘಾತದಿಂದ ಆಗುವ ಸಾವುಗಳು ಅಂದರೆ ರಸ್ತೆ ಅಪಘಾತ, ಹಾವು ಕಡಿತ, ಬೆಂಕಿ-ವಿದ್ಯುತ್ ಆಘಾತ, ಸಿಡಿಲು, ನೀರಲ್ಲಿ ಮುಳುಗುವಿಕೆ ಇತ್ಯಾದಿಗಳನ್ನು ಈ ಯೋಜನೆಗೆ ಒಳಪಡಿಸಲಾಗಿದೆ. ಮೃತರ ಸಂಬಂಧಿಕರು (ನಾಮ ನಿರ್ದೇಶಿತರಿಗೆ) ಕ್ರಮವಾಗಿ 549 ರೂ. ವಿಮಾ ಯೋಜನೆಗೆ 10 ಲಕ್ಷ ರೂ. ಹಾಗೂ 749 ರೂ. ವಿಮಾ ಯೋಜನೆಗೆ 15 ಲಕ್ಷ ರೂ. ವಿಮೆ ಪಡೆಯುತ್ತಾರೆ. 60 ಸಾವಿರ ರೂ. ಒಳರೋಗಿ ವೆಚ್ಚ ಹಾಗೂ 30 ಸಾವಿರ ರೂ. ಹೊರರೋಗಿ ವೆಚ್ಚವನ್ನು ಈ ಯೋಜನೆ ಒಳಗೊಂಡಿರುತ್ತದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಾವೇರಿ ವಿಭಾಗದ ಅಂಚೆ ಅಧೀಕ್ಷಕ ಬಿ.ನಾರಾಯಣ ಪ್ರಕಣೆಯಲ್ಲಿ ತಿಳಿಸಿದ್ದಾರೆ.