ಜಿಲ್ಲೆ

11 ಕೆಜಿ ಚಿನ್ನ, 70 ಕೆಜಿ ಬೆಳ್ಳಿ ಆಭರಣ ಜಪ್ತಿ

ಹಾವೇರಿ: ದಾಖಲೆ ಇಲ್ಲದೆ ಕೋಟ್ಯಾಂತರ ರುಪಾಯಿ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ವಶ.

6 ಕೋಟಿ 90 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಚೆಕ್ ಪೊಸ್ಟ್ ಸಿಬ್ಬಂದಿ

ಹಾವೇರಿ ನಗರದ ಹೊರವಲಯದಲ್ಲಿರೋ ಅಜ್ಜಯ್ಯ ಗುಡಿ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು.

ಹುಬ್ಬಳ್ಳಿ ಯಿಂದ ಹಾವೇರಿ ಮತ್ತು ದಾವಣಗೆರೆಯ ಚಿನ್ನದ ಅಂಗಡಿಗಳಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ನೀಡುತ್ತಿದ್ದ ವಾಹನ ವಶ.

11 ಕೆಜೆಯಷ್ಟು ಚಿನ್ನ, 70 ಕೆಜಿಯಷ್ಟು ಬೆಳ್ಳಿಯ ಆಭರಣಗಳನ್ನ ಸಾಗಿಸುತ್ತಿದ್ದ ವಾಹನ ಜಪ್ತಿ.

ಖರೀದಿಸಿ ಬಿಲ್ ಗಳು ಇವೆ. ಅದರೆ ಚುನಾವಣೆ ಅಧಿಕಾರಿಯಿಂದ ಯಾವುದೇ ಅನುಮತಿಯನ್ನ ಪಡೆದಿಲ್ಲ.

ನಿಖರವಾಗಿ ಚಿನ್ನಾಭರಣಗಳನ್ನ ಯಾವ ಊರಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅನ್ನೋ ದಾಖಲೆ ಇಲ್ಲ.

ಹಾವೇರಿ ಎಸ್.ಎಸ್.ಟಿ ತಂಡದ ಅಧಿಕಾರಿಗಳಿಂದ 6 ಕೋಟಿ 90 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ

ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಮಿತಿಗೆ ಚಿನ್ನಾಭರಣ ವರ್ಗಾವಣೆ.

ದಾಖಲೆ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ..

ಹಾವೇರಿ ಗ್ರಾಮೀಣ ಠಾಣೆಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ….