ಹಾವೇರಿ: ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಜಿಲ್ಲೆಯ ಎಂಟು ತಾಲೂಕುಗಳಲ್ಲಿ ನಾಲ್ಕು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ನಾಲ್ಕು ಬೆಳೆಗಳಾದ ಶೇಂಗಾ (ಮಳೆ ಆಶ್ರಿತ), ಭತ್ತ (ಮಳೆ ಆಶ್ರಿತ), ಭತ್ತ (ನೀರಾವರಿ) ಮತ್ತುಮುಸುಕಿನ ಜೋಳ(ಮಳೆ ಆಶ್ರಿತ) ಹಾಗೂ ಹೋಬಳಿ ಮಟ್ಟಕ್ಕೆ 23 ಬೆಳೆಗಳಾದ ಉದ್ದು (ಮಳೆ ಆಶ್ರಿತ), ಎಲೆಕೋಸು (ಕ್ಯಾಬೇಜ್), ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ), ಅಲಸಂದಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಈರುಳ್ಳಿ (ನೀರಾವರಿ), ಈರುಳ್ಳಿ (ಮಳೆ ಆಶ್ರಿತ), ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಕೆಂಪು ಮೆಣಸಿನಕಾಯಿ (ನೀರಾವರಿ), ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ), ಸಾವೆ (ಮಳೆ ಆಶ್ರಿತ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೋಯಾಅವರೆ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ) ಮತ್ತುಟೊಮ್ಯಾಟೋ ಬೆಳೆಗಳನ್ನು ಅಧಿಸೂಚಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.
ಬ್ಯಾಡಗಿ, ರಟ್ಟಿಹಳ್ಳಿ, ರಾಣೆಬೆನ್ನೂರ, ಹಾವೇರಿ, ಹಿರೇಕೆರೂರ ತಾಲೂಕಿನಲ್ಲಿ ಮುಖ್ಯ ಬೆಳೆಯಾದ ಮುಸುಕಿನ ಜೋಳ(ಮ.ಆ) ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ಮುಸುಕಿನ ಜೋಳ(ಮ.ಆ), ಭತ್ತ(ಮ.ಆ) ಮತ್ತು ಸವಣೂರ ತಾಲೂಕಿನಲ್ಲಿ ಮುಸುಕಿನ ಜೋಳ(ಮ.ಆ), ನೆಲಗಡಲೆ (ಶೇಂಗಾ)(ಮ.ಆ) ಬೆಳೆಗಳ ವಿಮಾ ಕಂತು ತುಂಬಲು ಜೂನ್ 31 ಕೊನೆಯ ದಿನವಾಗಿದೆ. ಮುಂಗಾರು ಬೆಳೆಗಳಾದ ಈರುಳ್ಳಿ (ನೀರಾವರಿ), ಈರುಳ್ಳಿ (ಮಳೆ ಆಶ್ರಿತ), ಎಲೆಕೋಸು ಬೆಳೆಗಳ ವಿಮಾ ಕಂತು ತುಂಬಲು ಜುಲೈ 15 ಕೊನೆಯ ದಿನವಾಗಿದೆ.
ಉದ್ದು (ಮಳೆ ದಿನಾಂಕ ), ಹತ್ತಿ (ನೀರಾವರಿ), ಹತ್ತಿ (ಮಳೆ ದಿನಾಂಕ ), ಅಲಸಂದಿ (ಮಳೆ ದಿನಾಂಕ ), ಹೆಸರು (ಮಳೆ ದಿನಾಂಕ), ಶೇಂಗಾ (ನೀರಾವರಿ), ಶೇಂಗಾ (ಮಳೆ ದಿನಾಂಕ ), ಮುಸುಕಿನ ಜೋಳ (ನೀರಾವರಿ), ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಕೆಂಪು ಮೆಣಸಿನಕಾಯಿ (ನೀರಾವರಿ), ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ), ಸಾವೆ (ಮಳೆ ಆಶ್ರಿತ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೋಯಾಅವರೆ (ಮಳೆ ಆಶ್ರಿತ) ಮತ್ತುಟೊಮ್ಯಾಟೋ ಬೆಳೆಗಳ ವಿಮಾ ಕಂತು ತುಂಬಲು ಜುಲೈ 31 ಕೊನೆಯ ದಿನವಾಗಿದೆ. ಸೂರ್ಯಕಾಂತಿ (ಮಳೆ ಆಶ್ರಿತ) ಬೆಳೆ ವಿಮಾ ಕಂತು ತುಂಬಲು ಆಗಸ್ಟ್ 16 ಕೊನೆಯ ದಿನವಾಗಿದೆ.
ಜಿಲ್ಲೆಯ ರೈತರು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಬೆಳೆ ವಿಮೆಯನ್ನು ಪಡೆಯವುದರ ಮೂಲಕ ಸ್ಥಿರ ಆದಾಯವನ್ನು ಪಡೆಯಬಹುದು. ಆದ್ದರಿಂದ ಜಿಲ್ಲೆಯರೈತರು ಸದರಿಯೋಜನೆಯ ಲಾಭ ಪಡೆಯಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಮಿಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆ ಆಶ್ರಿತವೋ, ನೀರಾವರಿಯೋ ಪರಿಶೀಲಿಸಿ
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಕಂದಾಯ ರಶೀದಿ, ಖಾತೆ ಪುಸ್ತಕ, ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ನೀಡಿ ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮಒನ್ ಕೇಂದ್ರಗಳಲ್ಲಿ ನೋಂದಾಯಿಸಬಹುದು. ತಮ್ಮ ಅರ್ಜಿಯಲ್ಲಿ ಯಾವ ಬೆಳೆ, ಮಳೆ ಆಶ್ರಿತವೋ ಅಥವಾ ನಿರಾವರಿಯೋ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ನೋಂದಾಯಿಸಿಕೊಳ್ಳಲು ಕೋರಲಾಗಿದೆ.