ಹಾವೇರಿ: ಬೆಂಗಳೂರಿನಲ್ಲಿ ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿಡಿಯೋಗ್ರಾಫರ್ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಹಾವೇರಿ ಜಿಲ್ಲಾ ಹಾಗೂ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರ ಮೂಲಕ ಗೃಹಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಫೋಟೋಗ್ರಾಫರ್ ರಘು ಹಾಗೂ ಜಯಂತ ಶಿವಾಜಿನಗರದ ಶ್ಯಾಮ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮದುವೆ ವಿಡಿಯೋಗ್ರಫಿ ಮಾಡುತ್ತಿದ್ದಾಗ ಸಣ್ಣ ವಿಚಾರಕ್ಕೆ ಹಲ್ಲೆ ಮಾಡಿರುವುದು ಸರಿಯಲ್ಲ.
ಮದುವೆ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್‌ಗಳು ಹೋದಾಗ ಸಣ್ಣಪುಟ್ಟ ಗಲಾಟೆಗಳನ್ನೇ ದೊಡ್ಡದಾಗಿ ಬಿಂಬಿಸಿಕೊಂಡು, ಅವರ ಸಾಮಗ್ರಿಗಳನ್ನು ನಷ್ಟ ಪಡಿಸುವಂತಹ ಕೆಲಸವನ್ನು ಯಾರೇ ಮಾಡಿದರೂ ಅಂಥವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು. ತಪ್ಪಿಸ್ಥರ ಮೇಲೆ ಪ್ರಕರಣ ದಾಖಲಿಸಿ, ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ರಿತ್ತಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ, ತಾಲೂಕು ಅಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ, ಕಾರ್ಯದರ್ಶಿ ಕುಮಾರ ಕೋಳೂರ, ಬಸವರಾಜ ಚಾವಡಿ, ಸದಸ್ಯರಾದ ಹೇಮಂತ ಗ್ಯಾರನಗೌಡ್ರ, ರಘುವೀರ ಚವ್ಹಾಣ, ಅಶೋಕ ಬ್ಯಾಡಗಿ, ರಾಜು ಬಾರ್ಕಿ, ಪ್ರಕಾಶ ನಂದಿ, ನಾರಾಯಣ ದೊಂಗಡಿ, ರವೀಂದ್ರ ಆನ್ವೇರಿ, ನಾಗರಾಜ ಹೊಸಮನಿ, ಮಾಲತೇಶ ಇಚ್ಚಂಗಿ, ಪಕ್ಕಿರಯ್ಯ ಹಿರೇಮಠ, ಪಕ್ಕಿರಸ್ವಾಮಿ ಮಟ್ಟೆಣ್ಣನವರ ಹಾಗೂ ಗುಡ್ಡಪ್ಪ ಲಮಾಣಿ, ಇತರರಿದ್ದರು.