ಜಿಲ್ಲೆ

ಆಗಸ್ಟ್‌ನಲ್ಲಿ ಒಳಮೀಸಲಾತಿ ಜಾರಿ; ಮಾಜಿ ಸಚಿವ ಎಚ್.ಆಂಜನೇಯ

ಹಾವೇರಿ: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡುವ ಬಗ್ಗೆ ಆದಿ ಕರ್ನಾಟಕ ಹಾಗೂ ಆದಿ ದ್ರಾವಿಡ ಎಂಬ ಮಾದರಿಯಲ್ಲಿ ಜನಸಂಖ್ಯೆಗನುಗುಣವಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅದರಂತೆ ಆ.4ರಂದು ವರದಿ ಸಲ್ಲಿಸಲಾಗುತ್ತಿದೆ. ವರದಿ ಪರಿಶೀಲಿಸಿ, ದೇಶದ ಜನತೆಗೆ ಸ್ವಾತಂತ್ರ್ಯ ಸಿಕ್ಕ ಆಗಸ್ಟ್ ತಿಂಗಳೊಳಗೆ ಪರಿಶಿಷ್ಟ ಜಾತಿಯವರಿಗೂ ಒಳಮೀಸಲಾತಿ ನೀಡಲಾಗುತ್ತಿದೆ. ನಕಲಿ ಹೋರಾಟಗಾರರನ್ನು ನಂಬಬೇಡಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.