ಜಿಲ್ಲೆ

ಮೃತಳ ವಾರಸುದಾರರಿಗೆ ಪರಿಹಾರ ಚೆಕ್ ವಿತರಣೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಸ್ತೆ ದಾಟುವಾಗ ಸಂಸ್ಥೆಯ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದ ನಗರದ ಜಯಲಕ್ಷ್ಮೀ ಕುಳೇನೂರು ಎಂಬುವರ ಕುಟುಂಬದವರಿಗೆ ವಿಭಾಗೀಯ ಕಚೇರಿಯಲ್ಲಿ ಇತ್ತೀಚೆಗೆ ಪರಿಹಾರದ ಚೆಕ್ ವಿತರಿಸಲಾಯಿತು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ಹಾವೇರಿ ಘಟಕದ ವಾಹನ ಸಂಖ್ಯೆ ಕೆಎ-27 ಎಫ್-611 ವಾಹನದಿಂದ ಜ.17ರಂದು ಅಪಘಾತ ಸಂಭವಿಸಿತ್ತು. ಜಯಲಕ್ಷ್ಮೀ ಕುಳೇನೂರು ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಸಂಸ್ಥೆಯ ನಿಯಮಾನುಸಾರ 50 ಸಾವಿರ ಪರಿಹಾರ ಮೊತ್ತ ನೀಡಲಾಗುತ್ತದೆ. ಅಪಘಾತ ನಡೆದ ಮರುದಿನ 25 ಸಾವಿರ ರೂ. ಮಧ್ಯಂತರ ಪರಿಹಾರ ನೀಡಲಾಗಿತ್ತು. ಬಾಕಿ ಉಳಿದ 25 ಸಾವಿರ ರೂ. ಪರಿಹಾರ ಮೊತ್ತದ ಚೆಕ್‌ಅನ್ನು ವಿಭಾಗೀಯ ಕಛೇರಿ ಹಾವೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ವಿಜಯಕುಮಾರ, ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ, ಸಹಾಯಕ ಲೆಕ್ಕಾಧಿಕಾರಿ ಪಿ ಮಹಾದೇವಸ್ವಾಮಿ ಸಮ್ಮುಖದಲ್ಲಿ ಮೃತ ಮಹಿಳೆ ಪತಿ ಜಗದೀಶ ಕುಳೇನೂರ ಅವರಿಗೆ ಚೆಕ್ ವಿತರಿಸಲಾಯಿತು.