ಜಿಲ್ಲೆ

ಹಾವೇರಿ ನಗರದ ವಿವಿಧೆಡೆ ಮೇ 30ರಂದು ಕರೆಂಟ್ ಇರಲ್ಲ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಾವೇರಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 30ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಸುಭಾಷ ಸರ್ಕಲ್ 11 ಕೆವಿ ಫೀಡರ್ ವ್ಯಾಪ್ತಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ರಾಜೇಂದ್ರನಗರ, ಗುರುಭವನ, ಕೊರಗರ ಓಣಿ, ಹೈಸ್ಕೂಲ್ ರಸ್ತೆ, ಜೆ.ಎಚ್.ಪಟೇಲ ಸರ್ಕಲ್, ಪುರದ ಓಣಿ, ಎಂ.ಜಿ.ರಸ್ತೆ, ಗದ್ದಿಗೆಯವರ ಓಣಿ, ಬಣ್ಣದ ಮಠ, ಹುಮ್ಮನಬಾದ್‌ಗಲ್ಲಿ, ಹುಕ್ಕೇರಿಮಠ ಹಾಗೂ ಕಂದಕ ರಸ್ತೆಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.