ಜಿಲ್ಲೆ

ಹಾವೇರಿಯಲ್ಲಿ ವಿವಿಧೆಡೆ ಮೇ 25ರಂದು ಕರೆಂಟ್ ಇರಲ್ಲ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಾವೇರಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೇ 25ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಎಪಿಎಂಸಿ 11 ಕೆವಿ ಫೀಡರ್‌ನಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಈ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಉದಯನಗರ, ನಾಗೇಂದ್ರನಮಟ್ಟಿ, ಎಪಿಎಂಸಿ, ವಿಜಯನಗರ, ವೀರಾಪುರ ರೋಡ್, ಅಗಡಿ ರೋಡ್, ಶಾಂತಿನಗರ, ಶಿವಬಸವನಗರ ಹಾಗೂ ಶಿವಯೋಗಿಶ್ವರ ನಗರದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.