ಹಾವೇರಿ: ವಿಜಯವಾಣಿ ದಿನಪತ್ರಿಕೆಯ ಧನ್ವಂತರಿ ಅಂಕಣಕಾರ, ಶಿರಸಿಯ ವೇದ ವೆಲ್‌ನೆಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ ಶಿರಸಿಯ ಡಾ.ವೆಂಕಟರಮಣ ಹೆಗಡೆ ಫೆ.22 ಹಾಗೂ 23ರಂದು ಹಾವೇರಿಯಲ್ಲಿ ಉಚಿತ ಸಂದರ್ಶನ ಶಿಬಿರ ಹಮ್ಮಿಕೊಂಡಿದ್ದಾರೆ.
ನಗರದ ಪಿಬಿ ರಸ್ತೆಯ ಜಿಲ್ಲಾ ನ್ಯಾಯಾಲಯದ ಪಕ್ಕದ ಶ್ರೀ ಸಾಯಿ ರೆಸಿಡೆನ್ಸಿಯಲ್ಲಿ ಫೆ.22, 23ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಡಾ.ಹೆಗಡೆ ಅವರು ಲಭ್ಯವಿರುತ್ತಾರೆ. ಶಿಬಿರದಲ್ಲಿ ಹೆಗಡೆ ಅವರು ಬರೆದಿರುವ ಮನೆಯಲ್ಲೇ ಪರಿಹಾರ, ಆಹಾರ ಆರೋಗ್ಯ, ಪವರ್ ಡಯಟ್ ಪುಸ್ತಕಗಳು, ಅಲ್ಫಾ ನ್ಯಾಚುರಲ್ ಆಹಾರ ಔಷಧಗಳು ಲಭ್ಯ ಇರುತ್ತವೆ. ಆಸಕ್ತರು ಮೊ.ಸಂ. 96328 67180, 87923 89600 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.