ಹಾವೇರಿ: ನಗರದಲ್ಲಿ ಗುರುವಾರ ಹಾವೇರಿ ತಾಲೂಕು ಪತ್ರಿಕಾ ವಿತರಕರ ಒಕ್ಕೂಟದ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು. ಒಕ್ಕೂಟದ ತಾಲೂಕು ಅಧ್ಯಕ್ಷ ಕರಬಸಪ್ಪ ಹಳದೂರ, ಕಾರ್ಯದರ್ಶಿ ಬೀರಪ್ಪ ಕೂರಗುಂದ, ಜಯಪ್ಪ ಬಣಕಾರ, ಸದಸ್ಯರಾದ ಮಂಜುನಾಥ ಶಿಗ್ಲಿ, ಸಂಜೀವ ಕೋಡಿಹಳ್ಳಿ, ಅಶೋಕ ಬಡಿಗೇರ, ಚೇತನ ರಾಜಪುರೋಹಿತ, ಬಸವರಾಜ ಬೆನ್ನೂರ, ಚಂದ್ರಶೇಖರ ಅಕ್ಕಿ, ಸಂಗಮೇಶ ರಾಯಬಾಗ, ಶಿವನಗೌಡ ಆಲದಕಟ್ಟಿ, ಶ್ರೀಧರ, ಶಂಭು ದುರ್ಗದ, ಆನಂದ ಹಳಕೊಪ್ಪ, ಮಲ್ಲಿಕಾರ್ಜುನ, ನಿಂಗಪ್ಪ ಕರ್ಜಗಿ, ಅಶೋಕ, ದರ್ಶನ, ವಿನಾಯಕ, ವರುಣ ಇತರರಿದ್ದರು.