ಜಿಲ್ಲೆ

ನವೋದಯ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಹಾವೇರಿ: ಹಾನಗಲ್ಲ ತಾಲೂಕಿನ ಮಹಾರಾಜಪೇಟೆಯ ಜವಾಹರ ನವೋದಯ ವಿದ್ಯಾಲಯದ 2024-25ನೇ ಸಾಲಿನ ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ.25ರವರೆಗೆ ಅವಧಿ ವಿಸ್ತರಿಸಲಾಗಿದೆ.
ಆ.26 ಮತ್ತು 27ರಂದು ಆನ್‌ಲೈನ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ಅಭ್ಯರ್ಥಿಗಳ ದತ್ತಾಂಶದಲ್ಲಿ ತಿದ್ದುಪಡಿಯನ್ನು ಲಿಂಗ, ವರ್ಗ, ಪ್ರದೇಶ, ಅಂಗವೈಕಲ್ಯತೆ ಮತ್ತು ಪರೀಕ್ಷಾ ಮಾಧ್ಯಮದಲ್ಲಿ ಮಾತ್ರ ಅನುಮತಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ವೆಬ್‌ಸೈಟ್ www.navodaya.gov.in ನಲ್ಲಿ ಉಚಿತವಾಗಿ ಸಲ್ಲಿಸಬಹುದು ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಶೇಖರಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.