ಹಾವೇರಿ: ನಮೋ ಬ್ರಿಗೇಡ್ 2.0 ವತಿಯಿಂದ ಜನಗಣ ಬೆಳೆಸೋಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಅ.11ರಂದು ಜಿಲ್ಲೆಗೆ ಆಗಮಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಮೋ ಬ್ರಿಗೇಡ್ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಅ.11ರಂದು ಶಿಗ್ಗಾಂವಿ ನಗರದಲ್ಲಿ ಮಧ್ಯಾಹ್ನ 3.30ಕ್ಕೆ ಬೈಕ್ ರ್ಯಾಲಿ ಆರಂಭವಾಗಲಿದೆ. ಸಂಜೆ 5.30ಕ್ಕೆ ಪಿಬಿ ರಸ್ತೆಯ ಅಜ್ಜಯ್ಯನ ಗದ್ದುಗೆಯಿಂದ ಬೈಕ್ ರ್ಯಾಲಿ ಆರಂಭವಾಗಲಿದೆ. ಹೊಸಮನಿ ಸಿದ್ದಪ್ಪ ವೃತ್ತ, ಹುಕ್ಕೇರಿ ಮಠ ಮಾರ್ಗವಾಗಿ ದೇವಗಿರಿ ತಲುಪಲಿದೆ.
ರಾತ್ರಿ 7 ಗಂಟೆಗೆ ದೇವಗಿರಿಯ ತೇರಿನ ಮನೆ ಆವರಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಜರುಗಲಿದೆ ಎಂದು ನಮೋ ಬ್ರಿಗೇಡ್ ಕಾರ್ಯಕರ್ತರಾದ ಶರಣು ಅಂಗಡಿ ಮತ್ತು ಅಭಿಷೇಕ ಉಪ್ಪಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.