ಜಿಲ್ಲೆ

ಹೊಳಿ ಗಂಗವ್ವನ ಪೂಜೆಗೈದ ಮಹಿಳೆಯರು; ಜಿಲ್ಲೆಯಲ್ಲಿ ಮುಂದುವರಿದ ನಾಗರ ಪಂಚಮಿ ಸಡಗರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಪವಿತ್ರ ಹಬ್ಬ ನಾಗರ ಪಂಚಮಿ ಸಡಗರ ಮುಂದುವರಿದಿದ್ದು, ಮಂಗಳವಾರ ಮಹಿಳೆಯರು, ಮಕ್ಕಳು ಹೊಳಿ ಗಂಗವ್ವನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು.

ಸೋಮವಾರ ದೇವಸ್ಥಾನಗಳಲ್ಲಿ ನಾಗದೇವರಿಗೆ ಹಾಲು ಎರೆದಿದ್ದ ಭಕ್ತರು, ಮಂಗಳವಾರ ಮನೆಯಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಬಳಿಕ ಮನೆಯ ಬಳಿ ಇರುವ ನದಿ, ಕೆರೆ, ಬೋರ್‌ವೆಲ್‌ಗಳಿಗೆ ವಿಶೇಷ ಅಲಂಕಾರ ಮಾಡಿ, ಉಡಿ ತುಂಬಿ, ವಿಶೇಷ ಪೂಜೆ ನೆರವೇರಿಸಿದರು. ತರಹೇವಾರಿ ಖಾದ್ಯಗಳನ್ನು ಮಾಡಿ ನೈವೇದ್ಯ ಮಾಡಿ ಭಕ್ತಿ ಮೆರೆದರು.